ಬಂಟ್ವಾಳ; ಸಮಾಜದ ಚಿಂತನೆಗಳು ಬದಲಾಗಬೇಕು, ಯುವ ಶಕ್ತಿಯಲ್ಲಿ ಸೇವಾ ಚಿಂತನೆಗಳನ್ನು ತುಂಬಬೇಕೆಂಬ ಸಂಕಲ್ಪ ದೊಂದಿಗೆ ಕೆಲ ಯುವ ಮನಸ್ಸುಗಳು ಸೇರಿಕೊಂಡು ಕಳೆದ 4 ವರ್ಷದ ಹಿಂದೆ ರಚನೆಯಾದ ” ಹಿಂದು ಗಟ್ಸ” ವಾಟ್ಸ್ ಪ್ ಬಳಗ ಹಿಂದುಗಳಲ್ಲಿ ತೀರಾ ಹಿಂದುಳಿದ ಬಡವರನ್ನು ಗುರುತಿಸಿ ಸಮಾಜದಿಂದ ಬರುವ ಸಮಾನ ಮನಸ್ಕ ಯುವಕರಿಂದ ಹಣ ಸಂಗ್ರಹಿಸಿ ಕಣ್ಣೀರು ಒರೆಸುವ ಕಾಯಕವನ್ನು ಸದ್ದಿಲ್ಲದೆ ಮಾಡುತ್ತಿದ್ದು,ಇದರ ಭಾಗವಾಗಿ ಎರಡು ಕುಟುಂಬಗಳಿಗೆ ಸಹಾಯಧನ ವಿತರಿಸುವ ಮೂಲಕ ಮಾನವೀಯತೆ ಮೆರೆದಿದೆ. ಸದಾ ಸಮಾಜಮುಖಿಚಟುವಟಿಗಳಲ್ಲಿ ತೊಡಗಿಸಿರುವ ಹಿಂದೂ ಗಟ್ಸ್ ವಾಟ್ಸಾಪ್ ಗ್ರೂಪ್ ವತಿಯಿಂದ ಕಿರಣ್ ಮತ್ತು ಕಂದಮ್ಮ ಸುಪ್ರೀತ್ ಇವರಿಗೆ 50,000 ಸಾ.ರೂ. ಸಹಾಯಧನ ವಿತರಿಸಲಾಗಿದೆ.

IMG-20171009-WA0002

*ಬಡವರ್ಗದ ಕುಟುಂಬವೊಂದರ ಕರುಣಾಜನಕ ಕಥೆ*
ಅವರು ಪಡುಕೊಣಾಜೆ ಗ್ರಾಮದ ರಾಜೇಶ್ ಮತ್ತು ಅಮಿತ ದಂಪತಿ ಕುಟುಂಬದ ಕರುಣಾಜನಕ ಕಥೆ ಇದು..
ರಾಜೇಶ್ ಮೂಡಬಿದಿರೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ಅಮಿತ ಗೃಹಿಣಿಯಾಗಿ ಸಂಸಾರದ ಜವಾಬ್ದಾರಿ ಹೊತ್ತಿದ್ದಾರೆ. ಎಲ್ಲರಂತೆ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ ಸುಂದರ ಸಂಸಾರವದು. ತಮ್ಮ ವಂಶೋದ್ಧಾರಕನ ನಿರೀಕ್ಷೆಯಲ್ಲಿದ್ದ ಅವರಿಗೆ ಭಗವಂತ ಗಂಡು ಮಗುವನ್ನೇ ಕರುಣಿಸಿದ್ದ. ಆ ಮಗುವಿನ ಹೆಸರು ಸುಪ್ರಿತ್.

IMG-20171009-WA0001
ಮಗು ಜನಿಸುತ್ತಲೇ ವಿಚಿತ್ರ ಖಾಯಿಲೆಯಿಂದ ನರಳುತ್ತಿತ್ತು. ಮಗು ಜನಿಸುವಾಗಲೇ ಒಂದು ಮಾಂಸದ ಮುದ್ದೆಯಂತಿತ್ತು. ಮಗುವಿನ ಮೈಯಲ್ಲಿ ಚರ್ಮಗಳು ಎದ್ದು ಬರುತ್ತಿತ್ತು! ಮಗುವನ್ನು ಎತ್ತಿ ಮುದ್ದಾಡಿದರೆ ಚರ್ಮ ಸುಲಿದು ರಕ್ತ ಬರುತ್ತದೋ ಎಂಬ ಭಯದಿಂದ ಆ ಆಸೆಯನ್ನೂ ಹತ್ತಿಕ್ಕಿದ್ದರು ಈ ದಂಪತಿ.
ನಂತರ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಲವಲವಿಕೆಯಿಂದ ಕುಣಿದಾಡಿ ಮನೆ ಬೆಳಕಾಗಬೇಕಿದ್ದ ಮಗು ‘ಕಂಜೆನೆಂಟಲ್ ಇಥಿಯೋಸಿಸ್’ ಎಂಬಚರ್ಮದಕಾಯಿಲೆಯಿಂದ ಬಳಲುತ್ತಿರುವುದುಪತ್ತೆಯಾಯಿತು. ಈ ರೋಗದ ಮುಖ್ಯ ಲಕ್ಷಣವೇನೆಂದರೆ ದೇಹದಲ್ಲಿ ಚರ್ಮ ಎದ್ದು ಅಲ್ಲಿಂದ ರಕ್ತ ಒಸರುವುದು. ಹಾಗಾಗಿ ತುಂಬ ಜಾಗರೂಕತೆಯಿಂದಮಗುವನ್ನು ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಸಾಮಾನ್ಯವಾಗಿ ದೇಹದಲ್ಲಿ 28 ದಿನಕ್ಕೊಮ್ಮೆ ದೇಹದ ಚರ್ಮ ಬದಲಾವಣೆಯಾಗುತ್ತಿದ್ದರೆ ಈ ಕಾಯಿಲೆ ಇದ್ದವರಿಗೆ ಚರ್ಮದ ಬೆಳವಣಿಗೆ ಪ್ರತಿ ನಾಲ್ಕು ದಿನಕೊಮ್ಮೆಯಿರುತ್ತದೆ.

IMG-20171009-WA0003
ಹೀಗಾಗಿ ಚರ್ಮ ತಟಸ್ಥವಾಗಿ ನಿಲ್ಲದಿರುವುದರಿಂದ ರಕ್ತ ಹೊರಚಿಮ್ಮುತ ಇರುತ್ತದೆ. ಇದು ಮಗುವಿಗೂ ಹಿಂಸೆಯಾಗಿದೆ! ಇದರ ಬಗ್ಗೆ ಚಿಂತಾಕ್ರಾಂತರಾದ ಹೆತ್ತವರು ಹಲವು ತಜ್ಞ ವೈದ್ಯರನ್ನು ಸಂಪರ್ಕಿಸಿದ ಪರಿಣಾಮ ಮಗುವಿನ ಕಾಯಿಲೆಯಲ್ಲಿ ಒಂದಿಷ್ಟು ಬದಲಾವಣೆಯಾಗಿದೆ
ಕೈಯಲ್ಲಿದ್ದ ಹಣವೆಲ್ಲ ಮಗುವಿನ ಚಿಕಿತ್ಸೆಗೆಂದು ಖರ್ಚಾಗಿ ಮಗುವಿನ ಚಿಕಿತ್ಸೆ ಮುಂದುವರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಸುಪ್ರಿತ್‍ನ ಹೆತ್ತವರು ಇದ್ದಾರೆ. ಈ ಪರಿಸ್ಥಿಯಲ್ಲಿದ್ದ ಕುಟುಂಬವನ್ನು ಗುರುತಿಸಿದ ಹಿಂದೂ ಗಟ್ಸ್ ವಾಟ್ಸಾಪ್ ಬಳಗದ ವತಿಯಿಂದ ರೂ 25,000 ಸಹಾಯಧನ ನೀಡಿದೆ.
ಹಾಗೆಯೇ ಮಂಗಳೂರಿನ ಉಳ್ಳಾಲದ ಸಮೀಪದ ಕೊಲ್ಯ ಕುಜುಮ ಗದ್ದೆಯ ಬಡ ಕುಟುಂಬದ ನಿವಾಸಿ ಬಾಳೆಹಣ್ಣಿನ ವ್ಯಾಪಾರ ಮಾಡಿಕೊಂಡು ತನ್ನ ಮನೆಯ ಎಲ್ಲ ಜವಾಬ್ದಾರಿಯನ್ನು ಹೊತ್ತು ಜೀವನ ಸಾಗಿಸುತ್ತಿದ್ದ ‘ಕಿರಣ್’ ಅಕಾಲಿಕ ಅಪಘಾತದಿಂದ ಕೋಮಾ ಸ್ಥಿತಿಯಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವ , ಒಪ್ಪತ್ತಿನ ಊಟಕ್ಕೂ ಪರದಾಡುವ ಕುಟುಂಬವನ್ನು ಗುರುತಿಸಿ ಹಿಂದೂ ಗಟ್ಸ್ ವಾಟ್ಸಾಪ್
ಬಳಗ 25000‌‌ ಸಾ.ರೂ. ಸಹಾಯಧನ ನೀಡಿದೆ ಈ ಸಂದರ್ಭದಲ್ಲಿ ಗ್ರೂಪ್ ನ ಎಡ್ಮಿನ್ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *