ಸುರತ್ಕಲ್: ವಾರದ ಹಿಂದೆಯಷ್ಟೇ ಹೊಸದಾಗಿ ಬೈಕ್ ಖರೀದಿಸಿದ ವ್ಯಕ್ತಿಗೆ ಯಮರೂಪವಾಗಿ ಬಂದ ನಾಯಿಯೊಂದು ಪ್ರಾಣಕ್ಕೆರವಾದ ಹೃದಯವಿದ್ರಾವಕ ಘಟನೆ ಸುರತ್ಕಲ್ನ ಕಾನ-ಬಾಳ ಸಮೀಪದ ಬಿಎಸ್ಎಫ್ ಗೇಟ್ ಸಮೀಪ ಗುರುವಾರ ಸಂಭವಿಸಿದೆ. ಮೃತಪಟ್ಟವನನ್ನು ಚಿಕ್ಕಮಗಳೂರು ನಿವಾಸಿ ಪ್ರಸ್ತುತ ಕೋಡಿಕೆರೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಿನೀತ್(23) ಎಂದು ಗುರುತಿಸಲಾಗಿದೆ.

ವಿನೀತ್ ಕಳೆದ ವರ್ಷವಷ್ಟೇ ಸುರತ್ಕಲ್ನ ಎಂಆರ್ಪಿಎಲ್ ಘಟಕಕ್ಕೆ ಕೆಲಸಕ್ಕೆ ಸೇರಿದ್ದ. ಈತನಿಗೆ ಹೊಸತೊಂದು ಬೈಕ್ ಖರೀದಿಸಬೇಕೆಂಬ ಆಸೆ ಬಹುಕಾಲದಿಂದಲೇ ಚಿಗುರಿತ್ತು. ಅದಕ್ಕಾಗಿ ತನಗೆ ಸಿಗುವ ಸಂಬಳದಲ್ಲಿ ಸ್ವಲ್ಪಸ್ವಲ್ಪವೇ ಭಾಗವನ್ನು ಕೂಡಿಕೊಳ್ಳಲಾರಂಭಿಸಿದ. ಅಂತೆಯೇ ಕಳೆದ ವಾರವಷ್ಟೇ ಬರೋಬ್ಬರಿ ಒಂದೂ ಲಕ್ಷ ರೂ. ಬೆಲೆಬಾಳುವ ಹೊಸತಾದ ಕರಿಷ್ಮಾ ಝಡ್ಎಂಆರ್ ಬೈಕ್ ಖರೀದಿಸಿದ. ಆದರೆ ವಿಧಿಯಾಟ ಬೇರೆಯೇ ಆಗಿದ್ದರಿಂದ ಹೊಸತಾಗಿ ಕೊಂಡ ಬೈಕ್ ಆತನಿಗೆ ಯಮರೂಪಿಯಾಗಿ ಎಗರಿದ್ದು ಮಾತ್ರ ವಿಪಯರ್ಾಸ.
ಅಷ್ಟಕ್ಕೂ ನಡೆದಿದ್ದೇನು?
ಗುರುವಾರ ಮುಂಜಾನೆಯ ವೇಳೆಗೆ ವಿನೀತ್ ತನ್ನ ಹೊಸಬೈಕ್ ಏರಿ ಎಂಆರ್ಪಿಎಲ್ ಕಂಪೆನಿಗೆ ಕೆಲಸಕ್ಕೆ ಹೊರಟಿದ್ದ. ಕಂಪೆನಿಯ ಗೇಟ್ ದಾಟಲು ಒಂದೆರಡು ನಿಮಿಷ ಇರುವಂತೆ ಕಾನ-ಬಾಳ ಸಮೀಪದ ಇಳಿಜಾರನ್ನು ಹತ್ತಿ ಮೇಲಕ್ಕೆ ಸಾಗುತ್ತಿದ್ದಾಗ ಹಠಾತ್ ಆಗಿ ನಾಯಿಯೊಂದು ಅಡ್ಡಬಂತು. ವಿನೀತ್ ನಾಯಿಯ ಜೀವವನ್ನು ರಕ್ಷಿಸಲು ಹೋದಾಗ ತನ್ನ ಬೈಕ್ ನಿಯಂತ್ರಣ ಕಳೆದುಕೊಂಡು ನಾಯಿಗೆ ಡಿಕ್ಕಿಹೊಡೆಯಿತಲ್ಲದೆ ಆತ ಬೈಕ್ನಿಂದ ರಸ್ತೆಗೆ ಚಿಮ್ಮಿ ಬಿದ್ದ ಎನ್ನಲಾಗಿದೆ. ಬಿದ್ದ ರಭಸಕ್ಕೆ ಆತನ ತಲೆ ಡಾಮಾರು ರಸ್ತೆಗೆ ಬಡಿದ ಪರಿಣಾಮ ಆತನ ಪ್ರಾಣಪಕ್ಷಿ ಸ್ಥಳದಲ್ಲೇ ಹಾರಿಹೋಗಿತ್ತು. ಅಲ್ಲದೆ ವಿನೀತ್ಬೈಕ್ಗೆ ಯಮಪಾಶವಾಗಿ ಬಂದಿದ್ದ ನಾಯಿ ಸಹ ಪ್ರಾಣ ಕಳೆದುಕೊಂಡಿತ್ತು.
ಸಪ್ರರ್ೈಸ್ ನೀಡಬೇಕಾಗಿದ್ದ ಆದರೆ…
ತಾನು ಬೈಕ್ ಕೊಳ್ಳುವುದಾಗಿ ಮನೆಮಂದಿಗೆ ಮೊದಲೇ ತಿಳಿಸಿದ್ದ. ಆದರೆ ವಿನೀತ್ ಬೈಕ್ ಕೊಂಡ ವಿಷ್ಯ ಸ್ವತಃ ನೆಯವರಿಗೂ ಗೊತ್ತಿರಲಿಲ್ಲ. ತಾನು ಹೊಸತಾಗಿ ಬೈಕ್ ಕೊಂಡ ವಿಷಯವನ್ನು ತಿಳಿಸಿ ಮನೆಯವರಿಗೆ ಸಪ್ರರ್ೈಸ್ ನೀಡಬೇಕೆಂದು ಬೈಕ್ಕೊಂಡಂದಿನಿಂದ ಮನೆಯವರಿಗೆ ತಿಳಿಸಿರಲಿಲ್ಲ. ಅಲ್ಲದೆ ದುಬಾರಿ ಬೈಕ್ ಕೊಂಡಿದ್ದಕ್ಕೆ ಮನೆಯವರು ಏನಂತರೋ ಎಂಬ ಸಂಕೋಚ ಕೂಡಾ ಅವನನ್ನು ಬಾಧಿಸಿತ್ತು.
ಬೈಕ್ನ ರಿಜಿಸ್ಟ್ರೇಷನ್ ಪ್ರಕ್ರಿಯೆ ಮೊನ್ನೆ ಬುಧವಾರ ನಡೆದಿದ್ದು, ನಿನ್ನೆ ಅದರ ನಂಬರ್ ಪ್ಲೇಟ್ ಸಿಗಬೇಕಾಗಿತ್ತು. ಈತನ ತಂದೆ ಮಂಜುನಾಥ ಕೂಡಾ ಚಿಕ್ಕಮಗಳೂರಿನಿಂದ ಬಂದು ಕುಳಾಯಿ ಸಮೀಪದ ಕೋಡಿಕೆರೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಇಷ್ಟು ದುಬಾರಿ ಬೈಕ್ ಕೊಂಡಿದ್ದಕ್ಕೆ ಬೈಯ್ಯುತ್ತಾರೆಂಬ ಕಾರಣಕ್ಕೆ ಬೈಕನ್ನು ಪಕ್ಕದ ಮನೆಯಲ್ಲಿಟ್ಟು ಮನೆಗೆ ನಡೆದುಕೊಂಡೇ ಹೋಗುತ್ತಿದ್ದ. ಆದರೆ ಮನೆಯರು ಆತ ಬೈಕ್ ಕೊಂಡ ಖುಷಿಯ ವಾತರ್ೆ ಕೇಳಬೇಕಾದವರು ಆತ ಮರಣಿಸಿದ ದುಃಖದ ವಾತರ್ೆ ಕೇಳಬೇಕಾಗಿರುವುದು ಮಾತ್ರ ವಿಪಯರ್ಾಸ.
ವಿನೀತ್ನ ತಲೆ ಡಾಂಬರು ರಸ್ತೆಗೆ ಬಡಿದ ಪರಿಣಾಮ ಆತ ಮೃತಪಟ್ಟಿದ್ದ. ಆದರೆ ತಲೆಗೆ ಹೆಲ್ಮೆಟ್ ಧರಿಸಿದ್ದರೆ ಆತ ಸಣ್ಣಪುಟ್ಟ ಗಾಯಗಳಿಂದ ಬದುಕುಳಿಯುವ ಛಾನ್ಸ್ ಅಧಿಕವಿತ್ತು ಎನ್ನುತ್ತಾರೆ ಸ್ಥಳೀಯರು. ಈತನ ಮೃತದೇಹವನ್ನು ಸುರತ್ಕಲ್ನ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಮೃತದೇಹವನ್ನು ಚಿಕ್ಕಮಗಳೂರಿಗೆ ಕಳಿಸಲಿದ್ದು ಅಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




