ವಿಟ್ಲ:ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ದ ಕ ಜಿಲ್ಲಾ ಮತ್ತು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದೊಂದಿಗೆ ದ ಕ ಜಿ ಪಂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ, ನ. ಕೃಷ್ಣಪ್ಪ ಕ್ರೀಡಾಂಗಣದಲ್ಲಿ ನ.5ರಂದು ಭಾನುವಾರದಂದು, ಪ್ರೊ ಕಬಡ್ಡಿ ಮಾದರಿಯ ಮ್ಯಾಟ್ ಅಂಕಣದಲ್ಲಿ ಮುಕ್ತ ಪುರುಷರ ವಿಭಾಗದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಮತ್ತು ಉತ್ತರ ಕನ್ನಡ ಅಂತರ್ ಜಿಲ್ಲಾ ಅಹರ್ನಿಶಿ `ಪಂಡಿತ್ ದೀನದಯಾಳ್ ಉಪಾಧ್ಯಾಯ ಟ್ರೋಪಿ 2017′ ಕಬಡ್ಡಿ ಪಂದ್ಯಾಟ ನಡೆಯಲಿದೆ.
ಈ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಮೋಹನದಾಸ ಉಕ್ಕುಡ ಇವರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ಸದಸ್ಯ ರವಿಪ್ರಕಾಶ್, ದುರ್ಗಾಂಬಾ ರೋಡ್ ಲೈನ್ಸ್ನ ರಮೇಶ್ ವರಪ್ಪಾದೆ, ಮೋನಪ್ಪ ಗೌಡ ಶಿವಾಜಿನಗರ, ಬಾಲಗೋಕುಲ ಸಮಿತಿ ಅಧ್ಯಕ್ಷ ಜಗದೀಶ ಪಾಣೆಮಜಲು, ದೈಹಿಕ ಶಿಕ್ಷಕರುಗಳಾದ ಸುರೇಶ್ ಶೆಟ್ಟಿ ಮತ್ತು ವಿದ್ಯಾಶಂಕರ್, ಸ್ವಸ್ತಿಕ್ ಫ್ರೆಂಡ್ಸ್ನ ಗೌರವಾಧ್ಯಕ್ಷ ನಾಗೇಶ ಬಸವನಗುಡಿ, ಅಧ್ಯಕ್ಷ ಸುದರ್ಶನ್, ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
