ಬಂಟ್ವಾಳ :ಗಾಯತ್ರಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ 2016-17ನೇ ಸಾಲಿನಲ್ಲಿ 17ಕೋಟಿ 38ಲಕ್ಷದ 58ಸಾವಿರದ 148 ರೂಪಾಯಿ (ಕಳೆದ ವರ್ಷ12ಕೋಟಿ) ಅಧಿಕ ವ್ಯವಹಾರ ನಡೆಸಿ ವರ್ಷಾಂತ್ಯಕ್ಕೆ 5.94ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷರಾದ ವಿಷ್ಣು ಭಟ್ ಅಡ್ಯೇಯಿ ತಿಳಿಸಿದ್ದಾರೆ.
ಅವರು ತಾ.09-09-2017 ಶನಿವಾರ ಮೆಲ್ಕಾರ್ ರಾಮ್ ದೇವ್ ಕಲ್ಯಾಣ ಮಂಟಪದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಸದಸ್ಯರಿಗೆ ಲಾಭಾಂ ಶದ ಶೇ.10ರ ಡಿವಿಡೆಂಡ್ ಘೋಷಿಸಲಾಯಿತು.

ಸಂಸ್ಥೆ “ಎ” ಮತ್ತು “ಬಿ” ಕ್ಲಾಸ್ ಸೇರಿ ಒಟ್ಟು 1842ಸದಸ್ಯರನ್ನು ಹೊಂದಿದ್ದು ಪ್ರಗತಿಯತ್ತ ಸಾಗುತ್ತಿದೆ. ಪಾಣೆಮಂಗಳೂರು ಮೆಲ್ಕಾರಿನಲ್ಲಿ ಕೇಂದ್ರ ಕಚೇರಿ, ಮಂಗಳಪದವು ಹಾಗೂ ಪುತ್ತೂರಿನಲ್ಲಿ ಶಾಖಾ ಕಛೇರಿ ಹೊಂದಿದ್ದು ಮುಂದೆ ಎರಡು ಶಾಖೆಗಳನ್ನು ತೆರೆಯುವ ಯೋಜನೆಗಳು ಆಡಳಿತ ಮಂಡಳಿಯ ಮುಂದಿದೆ ಎಂದು ಅವರು ಹೇಳಿದರು.
ಸ್ವರ್ಗಸ್ಥರಾದ ನಮ್ಮ ಸ್ಥಾಪಕ ನಿರ್ದೆಶಕ ರಾದ ದಿ.ಪರಮೇಶ್ವರ ಐತಾಳ್ ರ ಬಗ್ಗೆ ಉಪಾಧ್ಯಕ್ಷರಾದ ಶಾರದಾ ಎಸ್.ರಾವ್ ಸ್ವರಿಸುತ್ತ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಿರ್ದೇಶಕರಾದ ಕೈಯೂರು ನಾರಾಯಣ ಭಟ್, ಜಯಶಂಕರ ಬಾಸ್ರಿತ್ತಾಯ, ಲಕ್ಷ್ಮೀ ನಾರಾಯಣ ಉಡುಪ, ಪ್ರಭಾಕರ ರಾವ್ ಶಂಭೂರು, ಸೂರ್ಯನಾರಾಯಣ ಪೂವಳ, ಮೋಹನ ಆಚಾರ್ಯ, ರಾಜಾರಾಮ ಐತಾಳ್, ವಿಶಾಲಾಕ್ಷಿ ಆರ್.ಭಟ್ ಬಳ್ಳಮಜಲು, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜೇಶ್ವರಿ. ಕೆ , ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
