ಬಂಟ್ವಾಳ: ತಾಲ್ಲೂಕಿನ ಪೂಂಜಾ , ಕಡೆಶೀವಾಲಯ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ , ಅರಳ ಮತ್ತು ಕೊಯಿಲ ಗ್ರಾಮಗಳ ಗ್ರಾಮ ದೇವಸ್ಥಾನ ಶ್ರೀ ಗರುಡ ಮಹಾ ಕಾಳಿ ಸೇರಿದಂತೆ ಬಿಸಿರೋಡಿನಲ್ಲಿ ಹಾಡು ಹಗಲೇ ದಸ್ತಾವೇಜು ಬರಹಗಾರರ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ ನಗದನ್ನು ದೋಚಿರುವ ಪ್ರಕರಣದಿಂದ ಸಾರ್ವಜನಿಕ ವಲಯದಲ್ಲಿ ಆತಂಕ ಉಂಟಾಗಿದ್ದು, ಈ ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಶ್ರೀಘ್ರವಾಗಿ ಬಂದಿಸಿ ಭಯಮುಕ್ತ ವಾತಾವರಣ ನಿರ್ಮಿಸುವಂತೆ ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ಅವರು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ತಾಲೂಕಿನ ಮೂರು ಐತಿಹಾಸಿಕ ದೇವಸ್ಥಾನಗಳ ಗರ್ಭ ಗುಡಿಯೊಳಗೆ ಕಳ್ಳರು ನುಗ್ಗಿರುವುದರಿಂದ ಅಪವಿತ್ರವಾಗಿದೆ, ತಾಲೂಕಿನಲ್ಲಿ ವೃತ್ತಿಪರ ಕಳ್ಳರು ತಮ್ಮ ಬಾಲವನ್ನು ಬಿಚ್ಚಿದ್ದು ಪೋಲಿಸರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ರಾತ್ರಿ ಗಸ್ತನ್ನು ಹೆಚ್ಚಿಸಬೇಕು , ಹಿಂದೂ ದೇವಾಲಯಗಳಿಗೆ ಸರಕಾರ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

