ಬಂಟ್ವಾಳ: ವಿಶ್ವಕರ್ಮ ಸಮಾಜ ಸೇವಾ ಸಂಘ ಜೋಡುಮಾರ್ಗ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ 24 ನೇ ವರ್ಷದ ಸಾಮೂಹಿಕ ವಿಶ್ವಕರ್ಮ ಪೂಜಾ ಮಹೋತ್ಸವವು ಸೆ.17 ರ ಭಾನುವಾರ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಸಂದೀಪ್ ಬಿ.ಆಚಾರ್ಯ ತಿಳಿಸಿದ್ದಾರೆ.

ಬೆಳಿಗ್ಗೆ 9 ಗಂಟೆಯಿಂದ ಪೂಜಾ ವಿಧಿವಿಧಾನಗಳು ಆರಂಭಗೊಳ್ಳಲಿದೆ, ಬಳಿಕ ವಿಶ್ವಜ್ಯೋತಿ ಮಹಿಳಾ ಮಂಡಳಿ ಸದಸ್ಯೆಯರಿಂದ ಭಜನಾ ಸಂಕೀರ್ತನೆ ನಡೆದು 11 ಗಂಟೆಗೆ ಮಹಾಪೂಜೆ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನುಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನ ಬೈಲು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ ಆಚಾರ್ಯ ಭಾಗವಹಿಸುವರು. ಮನೋಜ್ ಆಚಾರ್ಯ ನಾಣ್ಯ, ಲೋಕೇಶ್ ಆಚಾರ್ಯ ಪೂಂಜಾಲಕಟ್ಟೆ, ಪುಷ್ಪಾ ಡಿ.ಆಚಾರ್ಯ ಇವರ ಘನ ಉಪಸ್ಥಿತಿಯಲ್ಲಿ ದಾರು ಶಿಲ್ಪಿ ಉಪೇಂದ್ರ ಆಚಾರ್ಯ ಮಾರ್ನಬೈಲು, ನಾಟಿ ವೈದ್ಯ ಸುರೇಶ್ ಆಚಾರ್ಯ ಕುಪ್ಪೆಪದವು, ನಿವೃತ್ತ ಆರೋಗ್ಯಾಧಿಕಾರಿ ಮಾಲತಿ ರಾಘವ ಆಚಾರ್ಯರನ್ನು ಸನ್ಮಾನಿಸಲಾಗುವುದು. ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಅಪರಾಹ್ನದ ಬಳಿಕ ವಿಶ್ವಜ್ಯೋತಿ ಮಹಿಳಾ ಮಂಡಳಿ ಸದಸ್ಯೆಯರಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
