ಬಂಟ್ವಾಳ: ಅತಿವೇಗ ದಲ್ಲಿ ಚಲಾಯಿಸುತ್ತಿದ್ದ ದ್ವಿಚಕ್ರ ಸವಾರನನ್ನು ಪ್ರಾಣ ಉಳಿಸಲು ಹೋದ ಲಾರಿ ಚಾಲಕ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕಸಮೀಪದ ದಾಸಕೋಡಿ ಎಂಬಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ಸುರೇಶ್ (45) ಎಂದು ಗುರುತಿಸಲಾಗಿದ್ದು, ಲಾರಿಕ್ಲೀನರ್ ಹೆಬ್ರಿ ನಿವಾಸಿ ಗುರುದತ್ ಗಾಯ ಗೊಂಡಿದ್ದಾರೆ
ಲಾರಿ ಮಾಣಿಯಿಂದ ಮೆಲ್ಕಾರ್ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ನೀರಪಾದೆ ಕಡೆಗೆ ತೆರಳುತ್ತಿದ್ದ ಆಕ್ಟೀವ್ ಅಡ್ಡಬಂದ ಪರಿಣಾಮ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ಡಿಕ್ಕಿ ಹೊಡೆದು ಪಲ್ಟಿ ಹೊಡೆದು ಚಾಲಕ ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲಿಯೇ ಮ್ರತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
*ಮಾನವೀಯತೆ ಮೆರೆದ ಎಸ್ ಐ.*
ಇದೇ ಸಂದರ್ಭದಲ್ಲಿ ಉಪ್ಪಿನಂಗಡಿ ಎಸ್‍ಐ ನಂದಕುಮಾರ್ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಟ್ವಾಳಕ್ಕೆ ಆಗಮಿಸಿ ವಾಪಾಸು ಉಪ್ಪಿನಂಗಡಿಗೆ ತೆರಳುತ್ತಿದ್ದಾಗ ದಾಸಕೋಡಿ ಬಳಿ ಅಪಘಾತಕ್ಕೊಳಗಾದ ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದಿರುವುದು ಕಂಡು ಬಂತು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನಗಳು ಮುಂದೆ ಬರದ ಹಿನ್ನೆಲೆಯಲ್ಲಿ ಎಸ್. ಐ. ನಂದಕುಮಾರ್ ಅವರೇ ತಮ್ಮ ಪೊಲಿಸ್ ವಾಹನದಲ್ಲಿ ಗಾಯಾಳುಗಳನ್ನು ಬಿ.ಸಿ.ರೋಡಿಗೆ ಕರೆದುಕೊಂಡು ಆಸ್ಪತ್ರಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಎಸ್ .ಐ. ನಂದಕುಮಾರ್ ತಮ್ಮ ಕರ್ತವ್ಯದ ಒತ್ತಡದ ನಡುವೆಯೂ ಗಾಯಾಳುಗಳನ್ನು ತಮ್ಮ ವಾಹನದಲ್ಲೆ ಕರೆದುಕೊಂಡು ಅಸ್ಫತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿರುವುದು ಸಾರ್ವತ್ರಿಕ ಶ್ಲಾಘನೆಗೊಳಗಾಗಿದೆ. ಅಪಘಾತಕ್ಕೆ ಸಂಬಂಧಿಸಿ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
