ಸುದ್ದಿ9ಕಿನ್ನಿಗೋಳಿ: ದ. ಕ. ಜಿಲ್ಲಾ ಪಂಚಾಯತ್ ಜಲಾನಯನ ಅಭಿವೃದ್ಧಿ ಇಲಾಖೆ, ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯಡಿ ರೈತರ ಕಲಿಕಾ ಪ್ರವಾಸಕ್ಕೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಸಚಿವ ಅಭಯಚಂದ್ರ ಜೈನ್ ಶನಿವಾರ ಸಂಜೆ ಚಾಲನೆ ನೀಡಿದರು. ಜಲಾನಯನ ಇಲಾಖೆಗೆ ಅನ್ವಯವಾಗುವ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರ ಈ ಕಲಿಕಾ ಪ್ರವಾಸ 2 ದಿನಗಳ ಕಾಲ ನಡೆಯಲಿದೆ. ಸುಮಾರು 130 ಮಂದಿ ಈ ಪ್ರವಾಸ ಕೈಗೊಂಡಿದ್ದು ಮುಂದಿನ 12 ನೇ ತಾರೀಖಿಗೆ ಇನ್ನೊಂದು ತಂಡ ಪ್ರವಾಸ ಕೈಗೊಳ್ಳಲಿದೆ, ಈ ಸಂದರ್ಭದಲ್ಲಿ ಜಲಾನಯನ ಇಲಾಖೆಯ ಸಹಾಯಕ ಕೃಷಿ ಅಭಿವೃದ್ಧಿ ಅಧಿಕಾರಿ ವಿ. ಎಸ್. ಕುಲಕಣರ್ಿ, ಎ.ಡಿ. ಎ ಪಿ. ಎಫ್. ಮಿರಾಂದ, ಅಧಿಕಾರಿ ಯುವರಾಜ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ , ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಮಾಜಿ ಅಧ್ಯಕ್ಷ ಸಂಜೀವ ಮಡಿವಾಳ, ಗ್ರಾ. ಪಂ. ಸದಸ್ಯರಾದ ಟಿ. ಎಚ್. ಮಯ್ಯದ್ದಿ , ಸುನಿಲ್ ಸಿಕ್ವೇರಾ, ಪ್ರಕಾಶ್ ಅಚಾರ್, ಟಿ. ಕೆ. ಅಬ್ದುಲ್ ಖಾದರ್ ಮತ್ತಿತರರು

ಉಪಸ್ಥಿತರಿದ್ದರು

kalika pravasa (1)

kalika pravasa (2)

By suddi9

Leave a Reply

Your email address will not be published. Required fields are marked *