ಸುದ್ದಿ9ಕಟೀಲು : ಕಟೀಲಿನ ಶ್ರೀ ದುಗರ್ಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ 6 ತಿಂಗಳ ವಾಸ್ತುಶಾಸ್ತ್ರ ಡಿಪ್ಲೊಮಾ ಕೋಸರ್್ ಅಗಸ್ಟ್ 12ರಿಂದ ಆರಂಭವಾಗಲಿದೆ. ಉದ್ಯೋಗಿಗಳಿಗೆ ಹಾಗೂ ಇತರ ವೃತ್ತಿ ನಡೆಸುವವರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಪರಾಹ್ನದಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ತಜ್ಞ ವಿದ್ವಾಂಸರು ತರಗತಿಗಳನ್ನು ನಡೆಸಲಿದ್ದಾರೆ. ಆಸಕ್ತ ಸಾರ್ವಜನಿಕರು ಇದರ ಸದುಪಯೋಗವನ್ನು ಮಾಡಿಕೊಳ್ಳಬಹುದಾಗಿದೆ. ವಿಶೇಷವಾಗಿ ವಾಸ್ತುವಿನ್ಯಾಸಗಾರರು (ಂಡಿಛಿಣಜಛಿಣ), ಕಂಟ್ರಾಕ್ಟರುಗಳು, ಪುರೋಹಿತರು, ಜ್ಯೋತಿಷಿ, ಇಂಜಿನಿಯರ್ಗಳು ಹಾಗೂ ಶಿಲ್ಪಿಗಳು ಈ ಕೋಸರ್ಿನ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆಸಕ್ತ ಪದವೀಧರರಿಗೆ ಮಂಗಳೂರು ವಿ.ವಿಯ ಸಂಸ್ಕೃತ ಎಂ.ಎ ಕೋಸರ್ು ಲಭ್ಯವಿದೆ. ಹೆಚ್ಚಿನ ವಿವರಗಳಿಗೆ ಕಾಲೇಜಿನ ಕಛೇರಿಯನ್ನು (0824-2200467 ಹಾಗೂ ಮೊ: 7760242064) ಸಂಪಕರ್ಿಸಲು ಕೋರಲಾಗಿದೆ.
