ಕದ್ರಿ ಗೋರಕ್ಷನಾಥ ಮಂದಿರದಲ್ಲಿ ಕದ್ರಿ ಠಾಣಾ ಇನ್ಸ್‌ಪೆಕ್ಟರ್ ಮಾರುತಿ ನಾಯಕ್‌ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಂಸದ ನಳಿನ್, ಕೇಸು ಹಾಕಿದ್ರೆ ಜಿಲ್ಲಾ ಬಂದ್ ಕರೆ ಕೊಡೋದಾಗಿ ಎಚ್ಚರಿಕೆ ನೀಡಿದ್ದಾರೆ.ರ‍್ಯಾಲಿ ವೇಳೆ ಬಂಧಿಸಿ ಕರೆದೊಯ್ದ ನೂರಾರು ಕಾರ್ಯಕರ್ತರು ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಪೂಜಾ ಪೈ ಸೇರಿ ಹಲವರ ಮೇಲೆ ಕೇಸು ಹಾಕಲು ಇನ್ಸ್‌ಪೆಕ್ಟರ್ ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡು ಸ್ಥಳಕ್ಕಾಗಮಿಸಿದ ಸಂಸದ ನಳಿನ್, ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ
