ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಠಲ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿ ಹಿರಿ ಮಲೇರಿಯಾ ಪರಿವೀಕ್ಷಣಾ ಅಧಿಕಾರಿ ಜಯರಾಮ ಪೂಜಾರಿ ಮಾಹಿತಿ ನೀಡುತ್ತಾ ದುಶ್ಚಟ ಎಂಬುದು ಬಡವ ಶ್ರೀಮಂತರೆಲ್ಲರನ್ನೂ ಆವರಿಸುತ್ತದೆ. ಬ್ಲೂವೆಲ್ ಆಟ, ಕುಡಿಯುವ ಮಾದಕ ವಸ್ತುಗಳು, ಗಾಂಜಾ ಇವುಗಳು ಮನುಷ್ಯನ ಆರೋಗ್ಯ ಹಾಳುಮಾಡುತ್ತದೆ ಎಂದರು.

ಶಿಕ್ಷಕ ಮಹಬಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ವಲಯ ಮೇಲ್ವಿಚಾರಕಿ ಪ್ರೇಮಾ ಪ್ರಸ್ತಾವಿಸಿದರು. ಶಿಕ್ಷಕ ಸಿ ಹೆಚ್ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಪ್ರಕಾಶ್ ವಂದಿಸಿದರು. ಸೇವಾಪ್ರತಿನಿಧಿ ಸರಿತಾ ಕಾರ್ಯಕ್ರಮ ನಿರೂಪಿಸಿದರು
