ಬಂಟ್ವಾಳ :ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿ, ಕಲ್ಲಡ್ಕ ಹಾಗೂ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಹಯೋಗದೊಂದಿಗೆ ಸಹಕಾರಿ ಆರೋಗ್ಯತಪಾಸಣಾ ಶಿಬಿರವು ಶ್ರೀರಾಮ ವಿದ್ಯಾಕೇಂದ್ರದ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮ ಉದ್ಘಾಟಿಸಿ, ಸಹಕಾರಿಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆಯನ್ನು ನೀಡುವುದರೊಂದಿಗೆ ಗ್ರಾಮೀಣ ಭಾಗದಜನ ಸಾಮಾನ್ಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿಕೊಂಡು ಸಂಘದ ವತಿಯಿಂದ ಸದಸ್ಯರಿಗೆ ಹಾಗೂ ಅವಲಂಬಿತರಿಗೆಉಚಿತವಾಗಿಆರೋಗ್ಯತಪಾಸಣೆ ಮಾಡುವಂತಹ ಕಾರ್ಯ ಶ್ಲಾಘನೀಯವಾದುದ್ದುಎಂದು ಹೇಳಿದರು.
ಸಂಘದಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿಯವರು ಪ್ರಸ್ತಾವಿಸಿ ಸ್ವಾಗತಿಸಿದರು. ಕೆ.ಎಸ್.ಹೆಗ್ಡೆ ಆಸ್ಪತ್ರೆಯತಜ್ಞ ವೈದ್ಯರಾದ ಡಾ| ವಿಜಯ ಪೈ ಹಾಗೂ ಅವರತಂಡದವರಿಂದ ವಿವಿಧಆರೋಗ್ಯತಪಾಸಣೆ ನಡೆಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಬಿ.ಸುಧಾಕರರೈ, ಗೋಪಾಲಕೃಷ್ಣ ಭಟ್, ಪೂವಪ್ಪಗೌಡ, ಜಯರಾಮರೈ, ಗಿರಿಯಪ್ಪಗೌಡ, ಕೊರಗಪ್ಪ ನಾಯ್ಕ, ಲೋಕಾನಂದ, ವೆಂಕಟ್ರಾಯ ಪ್ರಭು, ಮೃಣಾಲಿನಿ ಸಿ. ನ್ಯಾಕ್, ಮೀನಾಕ್ಷಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ್.ಕೆ ಉಪಸ್ಥಿತರಿದ್ದರು. ನಿರ್ದೇಶಕರಾದ ವೆಂಕಟ್ರಾಯ ಪ್ರಭು ವಂದಿಸಿದರು. ರಾಜೇಶ್‍ಕೊಟ್ಟಾರಿಯವರುಕಾರ್ಯಕ್ರಮ ನಿರೂಪಿಸಿದರು.
