ಬಂಟ್ವಾಳ: ಎಲ್ಲಾ ಇಲಾಖೆಗಳಿಗೂ ಮಾತೃ ಸ್ಥಾನದಲ್ಲಿರುವ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದು ವಿಶೇಷ ಅನುಭವವನ್ನು ನೀಡುತ್ತದೆ. ಇಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಉಪತಹಶೀಲ್ದಾರ್ ಪರಮೇಶ್ವರ ನಾಯ್ಕ್ ತನ್ನ ವಿಶಿಷ್ಟವಾದ ವೃತ್ತಿಶೈಲಿಯಿಂದ ಗುರುತಿಸಿಕೊಂಡವರು ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.

ಕಂದಾಯ ಇಲಾಖೆಯಲ್ಲಿ ವಯೋ ನಿವೃತ್ತಿಗೊಂಡ ಉಪತಹಶೀಲ್ದಾರ್ ಪರಮೇಶ್ವರ ನಾಯ್ಕ್ ಹಾಗೂ ಡಿ ಗ್ರೂಪ್ ನೌಕರ ನಾರಾಯಣ ಪೂಜಾರಿಯವರಿಗೆ ಬಿ.ಸಿ.ರೋಡಿನ ಎಸ್‍ಜಿಎಸ್‍ಆರ್‍ವೈ ಸಭಾಂಗಣದಲ್ಲಿ ನಡೆದ ಬಿಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.ವೇದಿಕೆಯಲ್ಲಿ ಉಪತಹಶೀಲ್ದಾರ್‍ಗಳಾದ ಸೀತಾರಾಮ, ಗೋಪಾಲ್, ಗ್ರೆಟ್ಟಾ ಉಪಸ್ಥಿತರಿದ್ದರು.
ಜನಾರ್ದನ್, ದಿವಾಕರ್, ತಾರಾನಾಥ್ ಅನಿಸಿಕೆ ವ್ಯಕ್ತಪಡಿಸಿದರು. ಕಂದಾಯ ನಿರೀಕ್ಷರಾದ ರಾಮ ಸ್ವಾಗತಿಸಿ, ನಿರೂಪಿಸಿದರು, ನವೀನ್ ವಂದಿಸಿದರು.
