ಬಂಟ್ವಾಳ: ಸಕಲ ವಿಘ್ನಗಳ ನಿವಾರಣೆಯ ಪೂಜಿತ ದೇವ ಗಣಪನ ಆರಾಧನೆ ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಸಂಘಟನಗಳ ವತಿಯಿಂದ ವಿಜೃಂಭಣೆಯಿಂದ, ಸಡಗರದಿಂದ ನಡೆಯಿತು. ಗಣಪನ ಹಬ್ಬಕ್ಕೆ ಸಿಂಗಾರಗೊಂಡ ಬಿಸಿರೋಡುಪೇಟೆ ಮತ್ತು ಗ್ರಾಮ ಗ್ರಾಮಗಳ ಮೂಲೆಗಳಲ್ಲಿ ಕೂಡಾ ಗಣಪನ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಮಾಡುವ ಮೂಲಕ ಗಣಪನ ಕೃಪೆಗೆ ಪಾತ್ರರಾದರು.
1. ಸಜೀಪ ಮೂನ್ನೂರು ಯುವಕ ಸಂಘದ ವತಿಯಿಂದ ಪೂಜಿಲ್ಪಟ್ಟ 44 ನೇ ವರ್ಷದ ಗಣಪ

2. ಸಾರ್ವಜನಿಕ ಗಣೇಶೋತ್ಸವ ಸಮಿತಿ ನವಜೀವನ ವ್ಯಾಯಮ ಶಾಲೆ ನರಿಕೊಂಬು ಇವರ ವತಿಯಿಂದ ಸತ್ಯ ದೇವತಾ ರಂಗಮಂದಿರದಲ್ಲಿ ಪೂಜಿಸಲ್ಪಟ್ಟ 35ನೇ ವರ್ಷದ ಗಣಪ.

3. ಶ್ರೀ ರಾಮಾಂಜನೇಯ ವ್ಯಾಯಮ ಶಾಲೆ (ರಿ). ಶಂಭೂರು ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ ಪೂಜಿಸಲ್ಪಟ್ಟ 14ನೇ ವರ್ಷದ ಗಣಪ.

4. ಯುವ ಸಂಗಮ ಸೇವಾ ಟ್ರಸ್ಟ್ (ರಿ) ಇವರ ವತಿಯಿಂದ ಯುವ ಸಂಗಮ ಸಮುದಾಯ ಭವನದಲ್ಲಿ ಪೂಜಿಸಲ್ಪಟ್ಟ 24ನೇ ವರ್ಷದ ಗಣಪ.

5. ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿಸಿರೋಡು ಇದರ ಆಶ್ರಯದಲ್ಲಿ ಬಿಸಿರೋಡು ರಕ್ತೇಶ್ವರೀ ದೇವಿ ದೇಸ್ಥಾನದ ವಠಾರದಲ್ಲಿ ಪೂಜಿಲ್ಪಟ್ಟ 38ನೇ ವರ್ಷದ ಗಣಪ
6. ಸಾರ್ವಜನಿಕ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಜಕ್ರಿಬೆಟ್ಟು ದಾಸ ರೈ ಮೈದಾನದಲ್ಲಿ ಪೂಜಿಲ್ಪಟ್ಟ 14ನೇ ವರ್ಷದ ಗಣಪ.

