ಬಂಟ್ವಾಳ: ತಾಲೂಕಿನ ಕೈರಂಗಳ ಗ್ರಾಮದ ಮುಡಿಪುಗುಡ್ಡೆ ಎಂಬಲ್ಲಿರುವ ಡಾ. ಮದನ್ ಮೋಹನ್ ನಾಯಕ್ ಅವರ ಪ್ರಾಚೀನ ವಸ್ತು ಸಂಗ್ರಹಾಲಯ , ಶ್ರೀರಾಮ ಧ್ಯಾನ ಕೇಂದ್ರ ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಜಗದೀಶ್ ಅವರು ಗುರುವಾರ ಭೇಟಿ ನೀಡಿದರು.

ಸಂಗ್ರಹಾಲಯದಲ್ಲಿದ್ದ ವಸ್ತುಗಳ ಬಗ್ಗೆ ಮಾಹಿತಿ ಪಡೆದ ಅವರು ಡಾ.ಮದನ್ ಮೋಹನ್ ನಾಯಕ್ ಅವರ ವಸ್ತು ಸಂಗ್ರಹ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಲೆಕ್ಕಾಧಿಕಾರಿಗಳಾದ ಮಮತ, ರಾಜಶೇಖರ್, ತಾಲೂಕು ಕಚೇರಿ ಸಿಬ್ಬಂದಿಗಳಾದ
ಇಬ್ರಾಹಿಂ, ಶೀತಲ್ ಈ ಸಂದರ್ಭ ಉಪಸ್ಥಿತರಿದ್ದರು.

