ಬಂಟ್ವಾಳ: ತಾಲೂಕಿನಲ್ಲಿ ಕಳೆದ ಎರಡು ತಿಂಗಳ ಕಾಲ ನಡೆದ ವಿವಿಧ ಅಪರಾಧ ಕೃತ್ಯಗಳ ಆರೋಪಿಗಳನ್ನು ಬಂಧಿಸುವಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅತೀ ಕೋಮು ಸೂಕ್ಷ್ಮ ಪ್ರದೇಶವಾದ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಮೇ 26ರಿಂದ ಆರಂಭವಾದ ಎರಡು ಕೋಮಿನ ನಡುವೆ ನಡೆದ ಅಹಿತಕರ ಘಟನೆಗಳು ಎರಡು ತಿಂಗಳಿಗೂ ಅಧಿಕ ಕಾಲ ಮುಂದುವರಿದಿತ್ತು. ಪರಿಣಾಮ ಬಂಟ್ವಾಳ ತಾಲೂಕಿನಲ್ಲಿ ಎರಡು ತಿಂಗಳಿಗೂ ಅಧಿಕ ಹಾಗೂ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡಾ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ತಾಲೂಕಿನಲ್ಲಿ ಎರಡು ತಿಂಗಳ ಅವಧಿಯಲ್ಲಿ ಎರಡು ಕೊಲೆ, ಹಲವು ಕೊಲೆಯತ್ನ, ಚೂರಿ ಇರಿತ, ಕಲ್ಲು ತೂರಾಟ, ವಾಹನಗಳಿಗೆ ಹಾನಿ ಪ್ರಕರಣಗಳು ನಡೆದಿದ್ದವು. ಈ ಪ್ರಕರಣದ ಆರೋಪಿಗಳನ್ನು ಬಂಧಿಸುಲ್ಲಿ ಜಿಲ್ಲೆಯ ಮೂವರು ಪೊಲೀಸ್ ಅಧಿಕಾರಿಗಳ ಪಾತ್ರ ಮಹತ್ವದಾಗಿದೆ.
ಪುತ್ತೂರು ಸರ್ಕಲ್ ಇನ್‍ಸ್ಪೆಕ್ಟರ್ ಮಹೇಶ್ ಪ್ರಶಾದ್, ಬೆಳ್ತಂಗಡಿ ಎಸ್ಸೈ ರವಿ, ಉಪ್ಪಿನಂಗಡಿ ಎಸ್ಸೈ ನಂದ ಕುಮಾರ್ ಈ ಮೂವರು ಪೊಲೀಸ್ ಅಧಿಕಾರಿಗಳಾಗಿದ್ದಾರೆ. ಈ ಮೂವರ ಪೈಕಿ ಮಹೇಶ್ ಪ್ರಸಾದ್ ಮತ್ತು ನಂದಕುಮಾರ್ ಈ ಹಿಂದೆ ಬಂಟ್ವಾಳ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ತಮ್ಮ ಸರ್ವೀಸ್ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ನಾಡಿ ಮಿಡಿತವನ್ನು ಸಂಪೂರ್ಣ ಅರಿತಿದ್ದ ಈ ಇಬ್ಬರು ತಾಲೂಕಿನಲ್ಲಿ ನಡೆದ ಪ್ರತೀಯೊಂದು ಪ್ರಕರಣದ ತನಿಖೆಯನ್ನು ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಕೀಯ ಪ್ರಭಾವ, ಹದೆಗೆಟ್ಟ ಕೋಮು ಸಾಮರಸ್ಯದ ನಡುವೆಯೂ ಈ ಮೂವರು ದಕ್ಷ ಅಧಿಕಾರಿಗಳ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

By Suddi9

Leave a Reply

Your email address will not be published. Required fields are marked *