ಕೈಕಂಬ : ಶಿಕ್ಷಣ ಇಲಾಖೆಯು ಗುರುಪುರ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ(ಪ್ರೌಢಶಾಲಾ ವಿಭಾಗ) 2017-18ರ ಸಾಲಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹೋಬಳಿ ಮಟ್ಟದ ಕ್ರೀಡಾಕೂಟದ ಜವಾಬ್ದಾರಿ ನೀಡಿದೆ. ಆದರೆ ಈ ಶಾಲೆಯಲ್ಲಿ ಸಮರ್ಪಕ ಮೈದಾನವಿಲ್ಲದ್ದರಿಂದ ಶಾಲಾ ಆಡಳಿತವು ಎಡಪದವಿನ ವಿವೇಕಾನಂದ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ ಏರ್ಪಡಿಸಲು ನಿರ್ಧರಿಸಿದೆ.

ಕ್ರೀಡಾಕೂಟದಲ್ಲಿ 36 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 850 ವಿದ್ಯಾರ್ಥಿಗಳು, 150 ದೈಹಿಕ ಶಿಕ್ಷಕರು ಮತ್ತು ಸಹ-ಶಿಕ್ಷಕರು, 50ರಷ್ಟು ಅತಿಥಿಗಳ ಸಹಿತ 1,100 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಊಟದ ವ್ಯವಸ್ಥೆಗೆ ಸುಮಾರು 1,00,000ರಿಂದ 1,20,000 ರೂ ತಗುಲಲಿದ್ದರೂ, ಇಲಾಖಾ ವತಿಯಿಂದ ವಿಶೇಷ ಅನುದಾನ ಲಭ್ಯವಿಲ್ಲ. ಆದ್ದರಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅಭಿಮಾನಿಗಳು ಅಥವಾ ಹಳೆ ವಿದ್ಯಾರ್ಥಿಗಳು ನೆರವಾಗಬಹುದೆಂದು(ಸಂಪರ್ಕಿಸಬಹುದಾದ ವಿಳಾಸ : 01242200026237(ಎಸ್‍ಡಿಎಂಸಿ ಸರ್ಕಾರಿ ಪಿಯು ಕಾಲೇಜು, ಸಿಂಡಿಕೇಟ್ ಬ್ಯಾಂಕ್, ಗುರುಪುರ, ಐಎಫ್‍ಎಸ್ ಕೋಡ್ : ಎಸ್‍ವೈಎನ್‍ಬಿ 0000124) ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.

By suddi9

Leave a Reply

Your email address will not be published. Required fields are marked *