ಬಂಟ್ವಾಳ: ಬಿ.ಸಿ.ರೋಡಿನ ಹೊಟೇಲೊಂದರ ಕಾರ್ಮಿಕನಿಗೆ ಅದೇ ಹೊಟೇಲಿನ ಮೆನೇಜರ್ ಹಲ್ಲೆ ನಡಸಿದ ಘಟನೆ ನಡೆದಿದೆ.ಬಸ್ ನಿಲ್ದಾಣದ ಬಳಿರುವ ಹೊಟೇಲ್ ಕಾರ್ಮಿಕ ರಾಮಕ್ರಷ್ಣ ಎಂಬವರು ಹಲ್ಲೆಯಿಂದ ಕೈ ಮುರಿತಕ್ಕೊಳಗಾಗಿ ಬಂಟ್ವಾಳ ಸರಕಾರಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹೊಟೇಲಿನ ಮೆನೇಜರ್ ಅಭಿಷೇಕ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.

IMG-20170821-WA0024ರಾಮಕ್ರಷ್ಣ ಕಳೆದ ಎಂಟು ತಿಂಗಳಿನಿಂದ ಈ ಹೊಟೇಲಿನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ಈಕ್ರತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.ಘಟನೆಯ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

By Suddi9

Leave a Reply

Your email address will not be published. Required fields are marked *