ಬಡಗಬೆಳ್ಳೂರು:ತಾಲ್ಲೂಕಿನ ಬಡಗಬೆಳ್ಳೂರು ಎಂಬಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ದಿವಂಗತ ಸೋಮಪ್ಪ ಸಪಲ್ಯ ಎಂಬವರ ಪುತ್ರ ದಿನೇಶ (36) ಎಂದು ಗುರುತಿಸಲಾಗಿದೆ. ಗಾರೆ ಕೆಲಸ ಮಾಡಿಕೊಂಡು ಸಹೋದರನ ಮನೆಯಲ್ಲಿದ್ದ ಇವರು ಶುಕ್ರವಾರ ಸಂಜೆ ಮದ್ಯದ ಜೊತೆಗೆ ವಿಷ ಬೆರೆಸಿಕೊಂಡು ಸೇವಿಸಿದ್ದರು ಎನ್ನಲಾಗಿದೆ.

22 vp dinesh sapalya

ಮನೆಯವರು ಬಂದು ನೋಡಿದಾಗ ಬಾಯಿಯಿಂದ ನೊರೆ ಬರುತ್ತಿರುವುದನ್ನು ಕಂಡು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಪಲಕಾರಿಯಾಗದೆ  ರಾತ್ರಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಶನಿವಾರ ಪ್ರಕರಣ ದಾಖಲಾಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *