ಬಂಟ್ವಾಳ: ವಿದ್ಯಾಗಿರಿಯ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಿ.ಆರ್.ಎಂ.ಪಿ.ಸಿ.ಬಿ.ಎಸ್.ಸಿ. ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಮಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮ ಜಿತರಾಮಾನಂದ ಸ್ವಾಮೀಜಿಯವರು ಮನಸ್ಸನ್ನು ಹತೋಟಿಯಲ್ಲಿಟ್ಟು ಏಕಾಗ್ರತೆಯನ್ನು ಸಾಧಿಸಿ ಹೇಗೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂಬುದನ್ನು ವಿವರಿಸಿದರು. ಶಾಲಾ ಸಂಚಾಲಕ ಭಾಮಿ ವಿಠಲ್ದಾಸ್ ಶೆಣೈ ಹಾಗೂ ಮಾಜಿ ಸಂಚಾಲಕ ಪಿ. ಗಣೇಶಪ್ರಭು. 
ಶಾಲಾ ಆಡಳಿತಾಧಿಕಾರಿ ಶ್ರೀ ಐತಪ್ಪ ಪೂಜಾರಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀಧರ್ ಬಿ., ಉಪಾಧ್ಯಕ್ಷೆ ಶ್ರೀಮತಿ ರೂಪಾ ಶೆಟ್ಟಿ, ಜೀವನ ಕೌಶಲ ತರಬೇತು ಸಂಯೋಜಕಿ ಶ್ರೀಮತಿ ಅರ್ಚನಾ ಬಾಳಿಗ ಹಾಗೂ ಎಲ್ಲ ಶಿಕ್ಷಕ ಶಿಕ್ಷಕೇತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ
ಸೋಮನಾಥ ಭಟ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ವಂದಿಸಿದರು. ಶಿಕ್ಷಕ ರವಿ ಕಾರ್ಯಕ್ರಮ ನಿರೂಪಿಸಿದರು
