ಬಂಟ್ವಾಳ: ಪೆರಾಜೆ ಗಣೇಶೋತ್ಸವ ಸಮಿತಿ ಮತ್ತು ಗುಡ್ಡ ಚಾಮುಂಡೇಶ್ವರೀ ಸೇವಾ ಟ್ರಸ್ಟ್ ನ  ವತಿಯಿಂದ 8ನೇ ವರ್ಷದ ಗಣೇಶ್ ಚತುರ್ಥಿ ಅಂಗವಾಗಿ ಪೆರಾಜೆ ಶಾಲಾ ವಠಾರದಲ್ಲಿ ನಡೆದ ವಿವಿಧ ಆಟೋಟ ಸ್ಪರ್ಧೆಗಳನ್ನು   ಪೆರಾಜೆ ಗ್ರಾಮದ ದೈವ ಪಾತ್ರಿ ಚೆನ್ನಪ್ಪ ಗೌಡ ಉದ್ಘಾಟಿಸಿದರು.IMG-20170821-WA0022

ಈ ಸಂದರ್ಭ ಕುಲಾಲ ಸಂಘದ ಸ್ಥಾಪಕಾಧ್ಯಕ್ಷರಾದ ಬಿ.ಎಸ್.ಕುಲಾಲ್ ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ವಿಜಯ ಬ್ಯಾಂಕಿನ ಮ್ಯಾನೇಜರ್ ಸದಾಶಿವ ಆಚಾರ್ಯ ಮಡಲ ಮತ್ತು ಮಾಣಿ ತಾ.ಪಂ.ಸದಸ್ಯೆ ಮಂಜುಳಾಕುಶಲ ಅವರು ಬಹುಮಾಣ ವಿತರಿಸಿದರು. ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ್ ಕಾಡೂರು, ಸ್ಥಾಪಕಾಧ್ಯಕ್ಷರಾದ ಹರೀಶ್ ರೈ ಪಾಣುರು, ಕ್ರೀಡಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಸಾದಿಕುಕ್ಕು, ಕಾರ್ಯದರ್ಶಿಗಳಾದ ಅಜಿತ್ ಕುಮಾರ್ ಬುಡೋಳಿ, ಟ್ರಸ್ಟನ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಶಾಲಾಭಿವೃದಿ ಸಮಿತಿ ಅಧ್ಯಕ್ಷ ಮೋನಪ್ಪ ಸಾಲಿಯಾನ್, ಟ್ರಸ್ಟ್‍ನ ಸಂಚಾಲಕ ರಾಘವ ಗೌಡ ಉಪಸ್ಥಿರಿದ್ದರು . ಗ್ರಾ.ಪಂ.ಸದಸ್ಯ ಉಮೇಶ್ ಎಂ.ಪಿ.ಸ್ವಾಗತಿಸಿ, ದಿವಾಕರ ಶಾಂತಿಲ ವಂದಿಸಿದರು. ಯತಿರಾಜ್ ಮತ್ತು ಲಕ್ಮೀಶ ಕಾರ್ಯಕ್ರಮ ನಿರೂಪಿದರು.

By Suddi9

Leave a Reply

Your email address will not be published. Required fields are marked *