ಕಿರುತೆರೆ ಒಬ್ಬಕಲಾವಿದನನ್ನು ಇರುವುದಕ್ಕಿಂತ ಸಣ್ಣವನನ್ನಾಗಿ ತೋರಿಸುತ್ತದೆ. ಅದೇ ಬೆಳ್ಳಿತೆರೆ ಕಲಾವಿದನನ್ನು ಇರುವುದಕ್ಕಿಂತ ದೊಡ್ಡದಾಗಿ ತೋರಿಸುತ್ತದೆ. ಆದರೆ ರಂಗಭೂಮಿ ಎನ್ನುವುದು ಕಲಾವಿದನನ್ನುಇದ್ದ ಹಾಗೆಯೇ ತೋರಿಸುತ್ತದೆ. ಒಬ್ಬಕಲಾವಿದತನ್ನನ್ನುತಾನು ತಿದ್ದಿಕೊಳ್ಳಲು ರಂಗಭೂಮಿ ಒಂದು ಉತ್ತಮ ವೇದಿಕೆ ಎಂದು ಮಹೇಶ್ ಕಾಲೇಜಿನ ಉಪನ್ಯಾಸಕ, ಯಕ್ಷಗಾನ ಕಲಾವಿದ ಸುನಿಲ್ ಪಲ್ಲಮಜಲು ಹೇಳಿದರು. ಇವರು ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಲಲಿತ ಕಲಾ ಸಂಘದ ವತಿಯಿಂದ ನಡೆಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಯಾವುದಾದರೊಂದುP Àಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಆ ಮೂಲಕವಾಗಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.photo 2

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಮಾತನಾಡಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕೂಡ ಹಮ್ಮಿಕೊಳ್ಳಲಾಗುವುದು. ಎಲ್ಲ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.
ಲಲಿತ ಕಲಾ ಸಂಘದ ಅಧ್ಯಕ್ಷೆ ಶಾಲಿನಿ ಬಿ. ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ಪಲ್ಲವಿ ಪೂಜಾರಿಗೋಪಾಲ್ ಸ್ವಾಗತಿಸಿ, ಪ್ರತೀಕ್ಷಾ ಬಿ. ವಂದಿಸಿದರು. ಗ್ರೆನಿಷಾ ಸುಷ್ಮಾ ವೇಗಸ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *