ಬಂಟ್ವಾಳ: ರಾಜ್ಯದಲ್ಲೇ ಮೊದಲ ಬಾರಿಗೆ ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಯೋಜನೆಯಡಿ ಹಕ್ಕುಪತ್ರ ನೀಡಿದ ಹೆಗ್ಗಳಿಕೆ ಹೊಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಮೂಲಕ ಶೇ.100ರಷ್ಟು ಹಕ್ಕುಪತ್ರ ವಿತರಿಸುವ ಗುರಿ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. 

ಅವರು ಅಮ್ಟಾಡಿ ಕುರಿಯಾಳ ಬಂಟ್ವಾಳ ಕಸ್ಬಾ ಗ್ರಾಮಗಳ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಹಲವು ವರ್ಷದಿಂದ ಮನೆ ಕಟ್ಟಿ ವಾಸವಿರುವ ಫಲಾನುಭವಿಗಳಿಗೆ ಬಂಟ್ವಾಳ ಲೊರೆಟ್ಟೋಪದವು ಚರ್ಚ್ ಹಾಲ್‍ನಲ್ಲಿ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದರು .ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ತುಂಬೆ, ತಾ.ಪಂ.ಉಪಧ್ಯಕ್ಷ ಬ್ಬಾಸ್ ಆಲಿ.ಮಾಯಿಲಪ್ಪ ಸಾಲಿಯಾನ್, ಗ್ರಾಮ ಲೆಕ್ಕಾಧಿಕಾರಿ ಶಶಿಕುಮಾರ್ , ಅಮೃತಾಂಶ್ , ಕೆ ಎಸ್ ರಾಜು ಲಮಾಣಿ ತಾಲ್ಲೂಕು ಕಛೇರಿ ಸಿಬ್ಬಂಧಿಗಳಾದ ಸಂದೀಪ್ ಕುರಿಯಾಳ ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.

