ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದುಕೊಂಡು , ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ತಾವು ಒಬ್ಬ ಮಹಿಳಾ ಜನಪ್ರತಿನಿಧಿಗೆ ವೈಯುಕ್ತಿಕವಾಗಿ ನಿಂಧಿಸಿರುವುದು ನಿಮ್ಮ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ ಎಂದು ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಸಚಿವ ರೈ ಗೆ ತಿರುಗೇಟು ನೀಡಿದೆ.
ಶೋಭಾ ಕರಂದ್ಲಾಜೆ ಬಗ್ಗೆ ವೈಯಕ್ತಿಕ ಟೀಕೆ ಮಾಡಿರುವ ರೈ ನಡೆಯನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾ ಬಂಟ್ವಾಳ ಅದ್ಯಕ್ಷ ವಜ್ರನಾಥ್ ಕಲ್ಲಡ್ಕ ಪತ್ರಿಕಾ ಹೇಳಿಕೆ ನೀಡುತ್ತಾ ವಿರೋಧ ಪಕ್ಷದವರ ಆಸ್ತಿಯ ಕುರಿತು ಹೇಳಿಕೆ ನೀಡುವ ಬದಲು ತಮ್ಮದೇ ಪಕ್ಷದವರ ಅಕ್ರಮ ಆಸ್ತಿಯ ಬಗ್ಗೆ ಗಮನ ಹರಿಸುವುದು ಒಳಿತು, ತಮ್ಮ ಹಿಂದೂ ವಿರೋಧಿ ಧೋರಣೆ ಕೈಬಿಟ್ಟು ದ್ವೇಷ ರಾಜಕಾರಣ ಮಾಡುವುದನ್ನು ಬಿಡಿ, ಜಲೀಲ್ ಕರೋಪಾಡಿ ಹತ್ಯೆ ಆರೋಪಿಯಾಗಿರುವ ತಮ್ಮದೇ ಪಕ್ಷದ ಗ್ರಾಪಂ ಸದಸ್ಯನನ್ನು ಬಂಧಿಸಿ ತಾವು ನೈಜ ರಾಜಕಾರಣಿ ಎಂದು ಸಾಬೀತುಪಡಿಸಿ ಎಂದು ಸವಾಲು ಹಾಕಿದರು

By Suddi9

Leave a Reply

Your email address will not be published. Required fields are marked *