ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಸೇರಿ ಸುಮಾರು 50 ಜನರಿಗೆ ಪ್ರಸಿದ್ಧಿ ಚಿಟ್ ಫಂಡ್ ಮಾಲೀಕ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.ನಟಿ ಸಂಜನಾ ಕಳೆದ 2 ವರ್ಷಗಳಿಂದ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧಿ ಚಿಟ್ ಫಂಡ್ ನಲ್ಲಿ 26 ಲಕ್ಷ ರೂಪಾಯಿ ಹೂಡಿದ್ದರು. ಇದೀಗ ಏಕಾಏಕಿ ಚಿಟ್ ಫಂಡ್ ಮಾಲೀಕ ನಟಿ ಸಂಜನಾಗೆ 26 ಲಕ್ಷ ರೂಪಾಯಿ ಪಂಗನಾಮ ಹಾಕಿ ನಾಪತ್ತೆಯಾಗಿರುವುದಾಗಿ ನಟಿ ಆರೋಪಿಸಿದ್ದಾರೆ.ನಟಿ ಸಂಜನಾ ಅವರಂತೆ ಸುಮಾರು 50 ಮಂದಿ ಪ್ರಸಿದ್ಧಿ ಚಿಟ್ ಫಂಡ್ ನಲ್ಲಿ ಹಣ ಹೂಡಿದ್ದರು. ಇದೀಗ ಪ್ರಸಿದ್ಧಿ ಚಿಟ್ ಫಂಡ್ ಮಾಲೀಕ(ಅಂದಾಜು 16 ಕೋಟಿ) ಕೋಟ್ಯಂತರ ರೂಪಾಯಿ ಹಣ ವಂಚಿಸಿ ನಾಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
