ಕೈಕಂಬ : ಸಮೀಪದ ಕಾಜಿಲ ಎಂಬಲ್ಲಿ ಗುಡ್ಡ ಕುಸಿದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿರುವ ಘಟನೆ ನಡೆದಿದೆ .ಬಿ.ಸಿ ರೋಡ್ ಮತ್ತು ಕೈಕಂಬಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದಾಗಿದ್ದು ಗುಡ್ಡ ಕುಸಿದ ಪರಿಣಾಮ ಗುಡ್ಡದ ಮೇಲಿನ ಬಂಡೆಕಲ್ಲೊಂದು ರಸ್ತೆಗೆ ಬಿದ್ದಿದ್ದು ಸಮೀಪದಲ್ಲಿದ್ದ ವಿದ್ಯುತ್ ಕಂಬಕ್ಕೂ ಹಾನಿಯುಂಟಾಗಿದೆ. ಮೆಸ್ಕಾಂ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಗೆ ಬಿದ್ದಿರುವ ಕಲ್ಲನ್ನು ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಶ್ರಮಿಸುತ್ತಿದ್ದು ಕಾಮಾಗಾರಿ ಪ್ರಗತಿಯಲ್ಲಿದೆ.
