ಬಜಪೆ ಬಂಟೆರ್ನ ಗೊಬ್ಬುಲು
ಸುಕಂದಕಟ್ಟೆ ಶ್ರೀ ನಿರಂಜನಾ ಸ್ವಾಮಿ ಕಾಲೇಜಿನ ಕ್ರೀಡಾಂಗಣದಲ್ಲಿ ಬಜಪೆ ವಲಯ ಬಂಟರ ಸಂಘದ ಆಶ್ರಯದಲ್ಲಿ ನಡೆದ 18 ಗ್ರಾಮ ವ್ಯಾಪ್ತಿಯ “ಬಂಟೆರ್ನ ಗೊಬ್ಬುಲು” ಗ್ರಾಮೀಣ ಕ್ರೀಡೋತ್ಸವವನ್ನು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮುದಾಯಿಕವಾಗಿ ಅಶಕ್ತರಿಗೆ ಆಸೆಯಾಗುವ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಶೈಕ್ಷಣಿಕ ಶ್ರೇಯಸ್ಸಿಗೆ ಸಹಕರಿಸುವ ಸದುದ್ದೇಶ ನಮ್ಮದಾಗಿರಬೇಕು ಎಂದರು.
ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷ ಬಡಗ ಎಡಪದವು ಶಾಸ್ತಾವು ಶ್ರೀ ಭೂತನಾಥೇಶವರ ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಮಾತನಾಡಿ, ಸಮುದಾಯದ ಸಮಗ್ರ ಅಭಿವೃದ್ಧಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಚಿಂತನೆ ಇದೆ. ಇದಕ್ಕಾಗಿ ಭೇದಭಾವ ಮರೆತು ಎಲ್ಲರೂ ಒಂದಾಗಬೇಕು ಎಂದರು. ಇದೇ ಸಂದರ್ಭ ಹಿರಿಯ ರಾಷ್ಟ್ರೀಯ ಕ್ರೀಡಾಪಟು ಶ್ರೀಧರ ಆಳ್ವ, ನಾಟಿ ವೈದ್ಯೆ ಲಕ್ಷೀ ಶೆಟ್ಟಿ, ಸೂಲಗಿತ್ತಿ ಸುಂದರಿ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಶಾಸ್ತವು ಶ್ರೀ ಭೂತನಾಥೇಶ್ವರ ದೇವಳದ ಆಡಳಿತ ಮಂಡಳಿ ಸದಸ್ತರಾದ ಪ್ರೇಮಲತಾ ವಿ.ಶೆಟ್ಟಿ ,ಜಿ.ಪಂ.ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಚರಣ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.ವಿದ್ಯಾಶ್ರೀ ಪ್ರಾಥರ್ಿಸಿದರು. ಗಂಗಾಧರ ಶೆಟ್ಟಿ ಸ್ವಾಗತಿಸಿ, ಬಂಟರ ಸಂಘದ ಕಾರ್ಯದಶರ್ಿ ಆರ್. ಎನ್.ಶೆಟ್ಟಿ ಕಳವಾರು ವಂದಿಸಿದರು. ಆರಂಭದಲ್ಲಿ 18 ಗ್ರಾಮಗಳ ತಂಡಗಳು ಪ್ರಮುಖರ ನೇತೃತ್ವದಲ್ಲಿ ಪಥ ಸಂಚಲನ ನಡೆಸಿ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು.ಮೊಗರು ಗ್ರಾಮ ತಂಡ ಉತ್ತಮ ಪಥ ಸಂಚಲನ ಪುರಸ್ಕಾರ ಪಡೆಯಿತು.ಅಜಿತ್ ಕುಮಾರ್ ರೈ ಮಾಲಾಡಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ರಿತೇಶ್ ಶೆಟ್ಟಿ ಬಲೂನುಗಳನ್ನು ಹಾರಿಸಿದರು.

