ಬಂಟ್ವಾಳ : ಆಲದಪದವು ಅಕ್ಷರ ಪ್ರತಿಷ್ಠಾನ ಹಾಗೂ ಬಿ.ಸಿ.ರೋಡು ಯಕ್ಷಲೋಕ ಸಾಂಸ್ಕøತಿಕ ಸಂಗಮದ ಸ್ಥಾಪಕ ಸಂಚಾಲಕರಾಗಿರುವ ಆಲದಪದವು ಗೋಪಾಲ ಅಂಚನ್ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಪತ್ರಕರ್ತರಾಗಿ, ರಂಗ ನಿರ್ದೇಶಕರಾಗಿ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಬಂಟ್ವಾಳ ‘ಅರಿವು ಟ್ರಸ್ಟ್’ನ ಟ್ರಸ್ಟಿ, ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ಬಂಟ್ವಾಳ ತಾಲೂಕು ಘಟಕದ ಸಂಚಾಲಕ, ಯಕ್ಷಲೋಕ ಲೈಫ್ ಎಜುಕೇಶನ್ ಫೌಂಡೇಶನ್ನ ಮೆನೇಜಿಂಗ್ ಟ್ರಸ್ಟಿ ಸಹಿತ ಹಲವಾರು ಸಾಹಿತ್ಯ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
