ಯುವ ಸಂಗಮ ಮೆಲ್ಕಾರ್ ಹಾಗೂ ಅಂಗನವಾಡಿ ಕೇಂದ್ರ ಮೆಲ್ಕಾರ್ ಇದರ ಜಂಟಿ ಆಶ್ರಯದಲ್ಲಿ ಮೆಲ್ಕಾರ್ ಅಂಗನವಾಡಿಯಲ್ಲಿ 71 ನೇ ಸ್ವಾತಂತ್ರೋತ್ಸವದ ದ್ವಜಾರೋಹಣವನ್ನು ನಿವೃತ್ತ ನೌಕಾದಳ ಸೇನಾನಿ ಲಯನ್ ಮಾಧವ ಮಾರ್ಲ ಇವರು ನೆರವೇರಿಸಿದರು.DSC_3061

ಅವರು ನೌಕಾದಳದ ಸೇನೆಯ ಕುರಿತು ಸವಿವರ ಮಾಹಿತಿ ನೀಡಿದರು. ಕರ್ನಾಟಕದಾದ್ಯಂತ ಸೈನ್ಯಕ್ಕೆ ಸೇರುವ ಸಂಖ್ಯೆ ಬಹಳ ಕಡಿಮೆ ಇದ್ದು, ಪ್ರತಿಯೊಂದು ಮನೆಯಿಂದ ಒಬ್ಬರಾದರೂ ಸೇನೆಗೆ ಸೇರಿ ದೇಶ ಸೇವೆ ಮಾಡುವಂತೆ ಕರೆ  ನೀಡಿದರು, ಯುವ ಸಂಗಮದ ವತಿಯಿಂದ ಅವರನ್ನುಯಿದವ ಸಂಗಮದ ಪದಾಧಿಕಾರಿಗಳು ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಯುವ ಸಂಗಮದ ಗೌರವ ಅಧ್ಯಕ್ಷರಾದ ಯಂ ಯನ್ ಕುಮಾರ್ , ಅಧ್ಯಕ್ಷರಾದ ವಿಠಲ ಶೆಣೈ , ಗೌರವ ಸಲಹೆಗಾರರಾದ ಕೃಷ್ಣ ನಾಯಕ್ ಉಪಸ್ಥಿತರಿದ್ದರು. ವಸಂತಿ ಗಂಗಾಧರ್ ವಂದಿಸಿದರು. ಶ್ರೀನಿವಾಸ ಗರುಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *