ಯುವ ಸಂಗಮ ಮೆಲ್ಕಾರ್ ಇದರ ಮೊಸರು ಕುಡಿಕೆ ಉತ್ಸವವು ದುರ್ಗಾಪರಮೇಶ್ವರಿ ಭಜನಾ ಮಂದಿರದ ನಂದಗೋಕುಲ ವೇದಿಕೆಯಲ್ಲಿ ಲಯನ್ ಜಯಂತ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ವೆಂಕಟ್ರಾಯ ಪ್ರಭು ಪೊರ್ಲಿಪಾಡಿ ಭಾಗವಹಿಸಿದ್ದರು. ಶ್ರೀ ಕೃಷ್ಣನು ಆಕರ್ಷಕ ನಿಲುವು ಹೊಂದಿದ್ದು, ಪಾರದರ್ಶಕ ವ್ಯಕ್ತಿತ್ವ , ನೊಂದವರ ಪರವಾಗಿದ್ದು, ನುಡಿಗೆ ತಪ್ಪದ ನಡೆಯನ್ನು ಪ್ರದರ್ಶಿಸಿದ್ದಾನೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಕುಮಾರಿ ಅದಿತಿ ಆಚಾರ್ಯ ಇವರನ್ನು ಎಸ್ ಎಸ್ ಎಲ್ ಸಿಯಲ್ಲಿ 96% ಅಂಕ ಪಡೆದದಕ್ಕಾಗಿ ಯುವ ಸಂಗಮದ ವತಿಯಿಂದ ಲಯನ್ ಜಯಂತ ಶೆಟ್ಟಿ ಹಾಗೂ ವೆಂಕಟ್ರಾಯ ಪ್ರಭು ಅವರು ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಿದರು. ಹಾಗೂ ಇತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಅನಾರೋಗ್ಯ ಪೀಡಿತರಿಗೆ ಸಹಾಯ ಧನ ನೀಡಿದರು.ವಿವಿಧ ಆಟೋಟ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಯುವ ಸಂಗಮದ ಗೌರವಾಧ್ಯಕ್ಷರಾದ ಯಂಯನ್ ಕುಮಾರ್ , ಅಧ್ಯಕ್ಷರಾದ ವಿಠಲ ಶೆಣೈ , ಕಾರ್ಯದರ್ಶಿ ಕರುಣಾಕರ , ಕೋಶಾಧಿಕಾರಿ ಪ್ರಕಾಶ ಶೆಣೈ , ಸಲಹೆಗಾರರಾದ ಕೃಷ್ಣ ನಾಯಕ್ ಉಪಸ್ಥಿತರಿದ್ದರು. ಹರೀಶ ಶೆಣೈ ಸ್ವಾಗತಿಸಿ ಶ್ರೀನಿವಾಸ ಗುರು ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.
