ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಸ್ಬಾ ಗ್ರಾಮದ ಕಲ್ಲಗುಡ್ಡೆಯ ನಿವಾಸಿಗಳ ಸ್ಥಿತಿ ಚಿಂತಾಜನಕವಾಗುತ್ತಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಕಲ್ಲಗುಡ್ಡೆ ಪರಿಸರದಲ್ಲಿ ಬೀಕರ ಗುಡ್ಡ ಕುಸಿತ ಉಂಟಾಗಿದ್ದು ಎರಡು ಮನೆಗಳ ಅಂಗಳದವರೆಗೆ ಕುಸಿತ ಉಂಟಾಗಿದೆ. ಇದರಿಂದ ಇಲ್ಲಿನ ಜನರು ಜೀವ ಭಯದಿಂದ ಜೀವನ ನಡೆಸುವಂತಾಗಿದೆ.

ರೆಹೆನಾ ಬಾನು ಹಾಗೂ ಕುಸುಮ ಎಂಬವರ ಮನೆಯ ಅಂಗಳದ ಮುಂಬಾಗದವರೆಗೆ ಭೂ ಕುಸಿತ ಉಂಟಾಗಿದೆ ಯಾವುದೇ ಕ್ಷಣದಲ್ಲೂ ಮನೆ ಧರಶಾಹಿಯಾಗುವ ಲಕ್ಷಣ ಕಂಡು ಬಂದಿದೆ. ಮಾತ್ರವಲ್ಲದೇ ಇದೇ ರೀತಿ ಧಾರಾಕಾರ ಮಳೆ ಮುಂದುವರಿದಲ್ಲಿ ಸುತ್ತಮುತ್ತಲಿನ ಎಲ್ಲಾ ಮನೆಗಳಿಗೂ ಕುಸಿತದ ಭೀತಿ ಎದುರಾಗಲಿದೆ. ಕುಸುಮ ಎಂಬವರಿಗೆ ಈಗಾಗಲೇ ಪಯರ್ಾಯ ವ್ಯವರ್ಸತೆ ಕಲ್ಪಿಸಲಾಗಿದೆ. ರೆಹೆನಾ ಬಾನು ಅವರ ಮನೆ ಮುಂಬಾಗ ಇದ್ದ ಶೌಚಾಲಯ ಗುಡ್ಡ ಕುಸಿತದ ವೇಳೆ ಧರಶಾಹಿಯಾಗಿದೆ. ಮನೆಯು ಬೀಳುವ ಹಂತಕ್ಕೆ ತಲುಪಿದ್ದು ಮನೆಮಂದಿ ಅಸಹಾಯಕತೆಯಿಂದ ಕಣ್ಣೀರು ಸುರಿಸುತ್ತಿದ್ದಾರೆ. ಪಯರ್ಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಭೂ ಮಾಲಿಕರು ಇದೀಗ ಭೂ ಕುಸಿತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಪಯರ್ಾಯ ವ್ಯವಸ್ಥೆ ಕಲ್ಪಿಸದೇ ಜವಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ.
ಇಲ್ಲಿನ ನಿವಾಸಿಗಳು ನೆಟ್ಟು ಬೆಳೆಸಿದ್ದ ತೆಂಗಿನ ಮರ, ಅಡಿಕೆ, ಬಾಳೆಗಿಡಗಳು ಉರುಳಿ ಬಿದ್ದಿದೆ. ಗುಡ್ಡ ಕುಸಿತದ ಮಣ್ಣು ನೀರಿಗೆೆ ರಾಡಿಯಾಗಿ ರಸ್ತೆಯನ್ನು ಆಕ್ರಮಿಸುತ್ತಿದೆ. ಮುಂದಿನ ಮಳೆಗೆ ಬಂಟ್ವಾಳ- ಮೂಡಬಿದ್ರೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿಯೂ ಎದುರಾಗಿದೆ.


