ಬಂಟ್ವಾಳ: ಬಂಟ್ವಾಳ ತಾಲೀನಲ್ಲಿ ಸಡಗರದಿಂದ ಜನರು ನಾಗರಪಂಚಾಮಿಯನ್ನು ಆಚರಿಸಿದರು. ಧಾರಾಕಾರ ಮಲೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಬೆಳಗ್ಗಿನಿಂದಲೇ ದೇವಸ್ಥಾನ, ನಾಗನನಗಳಿಗೆ ತೆರಳಿ ನಾಗರ ಕಲ್ಲಿಗೆ ತನು ಎರೆದರು. ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಸೀಯಾಳಾಭಿಷೇಕ ನಾಗತಂಬಿಲ ಸೇರಿದಂತೆ ವಿವಿಧ ವಿಶೇಷ ಪೂಜೆಗಳನ್ನು ಸಲ್ಲಿಸಿ ಕೃತಾರ್ಥರಾದರು.
ನಾಗರಪಂಚಮಿಯ ದಿನ ಎಡೆಬಿಡದೆ  ಸುರಿದ ಮಳೆಯನ್ನು  ಲೆಕ್ಕಿಸದೆ ಮಹಿಳೆಯರು, ಪುರುಷರು , ಮಕ್ಕಳೊಂದಿಗೆ ಸೇರಿ ಅವರವರ  ಮೂಲಸ್ಥಾನದ  ನಾಗನಿಗೆ ಹಾಲು ಎರೆದು ತಂಬಿಲ ಸೇವೆ ಮಾಡಿ  ಪುನೀತರಾದರು.  ಬಂಟ್ವಾಳದ ವಿವಿಧ ದೇವಸ್ಥಾನದ ನಾಗಬಣಗಳಲ್ಲಿ   ಭಕ್ತಾಧಿಗಳು ಇಂದು ಬೆಳಗ್ಗಿನಿಂದಲೇ  ನಾಗನಿಗೆ ಹಾಲು ಸೀಯಾಳಾಭಿಷೇಕ ತಂಬಿಲ ಸೇವೆಗಳನ್ನು  ಮಾಡಿ ಪ್ರಸಾದ ಸ್ವೀಕರಿಸಿದರು.ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನ, ಶ್ರೀ ಅನ್ನಪೂಣೇಶ್ವರೀ ದೇವಸ್ಥಾನ, ಶ್ರೀ ರಕ್ತೇಶ್ವರೀ ದೇವಸ್ಥಾನಗಲ್ಲಿ ನಾಗರ ಪಂಚಮಿಯ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಗಳಿಗೂ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಸ್ಥಾನದಲ್ಲಿ ನಾಗರಪಂಚಮಿಯ ಆಚರಣೆ ನಡೆಯಿತು.

annapuneshawri

annapuneshawri 1

 

chandikeshawri

mayarabailu

By suddi9

Leave a Reply

Your email address will not be published. Required fields are marked *