ಬಂಟ್ವಾಳ : ಯುವ ಸಂಗಮ ಮೆಲ್ಕಾರ್ ಇದರ ವತಿಯಿಂದ ಕಂಡೊಂಡ್ ಒಂಜಿ ದಿನ ಕಾರ್ಯಕ್ರಮವು ಮೆಲ್ಕಾರ್ನಲ್ಲಿ ನಡೆಯಿತು. ಯುವ ಸಂಗಮದ ಗೌರವಾಧ್ಯಕ್ಷ ಯಂ.ಯನ್. ಕುಮಾರ್ ಕೃಷಿಕರ ಅಗತ್ಯ ಪರಿಕರಗಳಲ್ಲಿ ಒಂದಾದ ಮುಟ್ಟಾಲೆಯನ್ನು ತಲೆಗೆ ಇಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಮ್ಮ ದೇಶದಲ್ಲಿ ಗದ್ದೆಯಲ್ಲಿ ಶ್ರಮಪಟ್ಟು ದುಡಿದ ರೈತರಷ್ಟು ಆರೋಗ್ಯವಂತರು ಪಟ್ಟಣದಲ್ಲಿಲ್ಲ ಎಂದು ನಾವು ಸಮೀಕ್ಷೆಯಲ್ಲಿ ತಿಳಿದ್ದಿದ್ದೇವೆ. ನಾವು ತಿನ್ನು ಅನ್ನ ಹೇಗೆ ಆಗುತ್ತದೆ ಎಂಬ ಕಲ್ಪನೆ ಈಗಿನ ವಿದ್ಯಾರ್ಥಿಗಳಿಗಿಲ್ಲ ಆದ್ದರಿಂದ ಶಾಲಾ ವಿದ್ಯಾರ್ಥಿಗಳಿಗೆ ಇಂತಹ ಗದ್ದೆಗಳಿಗೆ ನೇಜಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಾಗ ಕೃಷಿಕರ ಪರಿಶ್ರಮ ಅರ್ಥವಾಗುತ್ತದೆ ಎಂದರು. ಬಳಿಕ ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ಜರಗಿತು. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ನ ಅಧ್ಯಕ್ಷರಾದ ನವೀನ್ ಹಾಗೂ ಯುವ ಸಂಗಮದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶ್ರೀನಿವಾಸ ಗುರುಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
