ಬಂಟ್ವಾಳ :ಸೋಮವಾರವಷ್ಟೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಹದಗೆಟ್ಟು ಸಂಚಾರಕ್ಕೆ ಆಯೋಗ್ಯವಾಗಿರುವ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯ ದುರಸ್ಥಿಗೆ ಒತ್ತಾಯಿಸಿ ಸದಸ್ಯರೇ ರಸ್ತೆಗಿಳಿದು ಪ್ರತಿಭಟನೆಗೆ ನಿರ್ಧರಿಸಿದ ಮರುದಿನವೇ ಖುದ್ಡು ಪುರಸಭೆಯೇ ಗುಂಡಿ ಮುಚ್ಚುವ ತೇಪೆ ಕಾರ್ಯ ನಡೆಸಿದೆ. ಕೆಲದಿನಗಳ ಹಿಂದೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ದತ್ತಾ ಅವರ ಅಗಮನದ ಹಿನ್ನಲೆಯಲ್ಲಿ ಪುರಸಭೆ ಅರ್ಧದಷ್ಟು ರಸ್ತೆಯ ಗುಂಡಿ ಮುಚ್ಚಿತ್ತು.ಡಿಜಿಯವರು ವಾಪಾಸಾದ ಬೆನ್ನಲ್ಲೇ ಗುಂಡಿಯ ತೇಪೆ ಜಲ್ಲಿಯು ಎದ್ದು ಹೋಗಿತ್ತು.20170801_100900

ಇದೀಗ ಮಂಗಳವಾರ ಮತ್ತೆ ಪುರಸಭೆ ಗುಂಡಿಗೆ ತೇಪೆ ಹಾಕಿದೆ.ಈ ತೇಪೆ ಯು ಪ್ರಯೋಜನಕ್ಕೆ ಬಾರದು, ಒಂದೇ ಮಳೆಗೆ ಕೊಚ್ಚಿಹೋಗುವುದರಲ್ಲಿ ಅನುಮಾನವೇ ಇಲ್ಲ.ಈ ಹಿಂದೆ ವಾಹನಚಾಲಕರು ಬಿಕ್ಷೆ ಬೇಡಿ ಹೊಂಡ ಮುಚ್ವಿದ್ದರು.ಅದು ಕೂಡ ಮಳೆಗೆ ಎದ್ದು ಹೋಗಿತ್ತು.ಸಾಲದೆಂಬಂತೆ ವಾಹನ ಚಾಲಕ ಸಮುದಾಯ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆಯನ್ನು ನಡೆಸಿದರೂ ರಾ.ಹೆ.ಪ್ರಾ.ಇಲಾಖೆ ಮಾತ್ರ ಇತ್ತ ತಲೆ ಹಾಕಿಯು ಮಲಗಿಲ್ಲ.ಸರ್ವೀಸ್ ರಸ್ತೆಯಲ್ಲಿ ವಾಹನ ಬಿಡಿ ಜನ ಸಂಚಾರಕ್ಕೂ ಅಯೋಗ್ಯವಾಗಿದ್ದು,ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ಸಚಿತ್ರ ವರದಿಗಳು ಪ್ರಕಟವಾದರೂ ರಾ.ಹೆ.ಪ್ರಾ.ಇಲಾಖೆ ಜಪ್ಪಯ್ಯ ಅನ್ನಲಿಲ್ಲ.ಬೆನ್ನತ್ತಿ ಇಲಾಖೆಯ ಕಿವಿ ಹಿಂಡಿ ಈರಸ್ತೆಗೆ ಶಾಶ್ವತ ಪರಿಹಾರಕೊಂಡಕೊಳ್ಳಬೇಕಾದ ಜನಪ್ರತಿನಿಧಿಗಳು ಪರಸ್ಪರ ಆರೋಪ,ಪ್ರತ್ಯಾರೋಪದಲ್ಲೆ ಮಗ್ನರಾಗಿದ್ದಾರೆ.ಇತ್ತ ವಾಹನಗಳು ಈ ರಸ್ತೆಯಲ್ಲಿ ವಾಲಿಕೊಂಡು ಸರ್ಕಸ್ ಮಾಡಿಕೊಂಡು ಚಲಿಸುತ್ತಿದೆ.ಜನಸಾಮಾನ್ಯರು ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ.ಇನ್ನೊಂದೆಡೆ ಕಾಂಕ್ರೀಟ್ ಚರಂಡಿ ಕಾಮಗಾರಿ ನಡೆಯುತ್ತಿದೆ.ಒಂದೊಮ್ಮೆ ಪುರಸಭೆ ಕೂಡ ರಸ್ತೆ ದುರಸ್ಥಿಗೆ ರಾ.ಹೆ .ಪ್ರಾ .ಇಲಾಖೆಯತ್ತ ಬೊಟ್ಟು ಮಾಡಿತ್ತು.ಆದರೆ ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಸೋಮವಾರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದ್ದು,ಸದಸ್ಯರು ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು.ಆದರೆ ಮಂಗಳವಾರ ಪುರಸಭೆಯೇ ರಸ್ತೆಗೆ ತೇಪೆ ಕಾರ್ಯ ನಡೆದಿದೆ.

By Suddi9

Leave a Reply

Your email address will not be published. Required fields are marked *