ಬಂಟ್ವಾಳ : ಗೋಳ್ತಮಜಲು ಅನುಗ್ರಹ ಮಹಿಳಾ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಝಕರಿಯಾ ಕಲ್ಲಡ್ಕ ಪುನರಾಯ್ಕೆಯಾಗಿದ್ದಾರೆ. Zakariyya Kalladka
ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಕೋಶಾಧಿಕಾರಿಯಾಗಿ ಮಿತ್ರದಾಸ ರೈ ಪೆರ್ನೆ ಅವರು ಸರ್ವಾನುಮತದಿಂದ ನೇಮಕಗೊಂಡರು. ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಎ.ಎಂ. ಇಸ್ಹಾಕ್ ಅರ್ಕುಳ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಿ.ಕೆ. ಇಬ್ರಾಹಿಂ, ಸದಸ್ಯರುಗಳಾದ ಮುಹಮ್ಮದ್ ಸುಲೈಮಾನ್, ಅಬ್ದುಲ್ ಕುಂಞ  ವಿಟ್ಲ, ಕಾಲೇಜು ಉಪ ಪ್ರಾಂಶುಪಾಲೆ ಮಮತಾ, ಉಪನ್ಯಾಸಕಿ ಕುಮಾರಿ ಉಮ್ಮು ಅಸ್ರ ಉಪಸ್ಥಿತರಿದ್ದರು.
ಸಂಘದ ಸದಸ್ಯರನ್ನಾಗಿ ಎಂ. ರಫೀಕ್, ಅಬ್ದುಲ್ ಖಾದರ್ ಡಿ.ಕೆ., ಶೇಖ್ ಕುಂಞÂ, ಹಮೀದ್ ಕಂದಕ್ ಮಿತ್ತೂರು, ಹಮೀದ್ ಕರಾಯ, ಮುಸ್ತಫಾ ಸುಲೈಮಾನ್ ಬಿ.ಕೆ., ಹಾರೂನ್ ರಶೀದ್ ಅಗ್ನಾಡಿ, ಅವ್ವಮ್ಮ, ದುಲೈಕಾ, ಲೈಲಾ, ನಫೀಸ ಇವರನ್ನು ಆರಿಸಲಾಯಿತು.ಕಾಲೇಜು ಪ್ರಾಂಶುಪಾಲೆ ಜ್ಯೋತಿ ರತ್ನ ಸ್ವಾಗತಿಸಿ, ಪದವಿ ವಿಭಾಗದ ಉಪ ಪ್ರಾಂಶುಪಾಲೆ ಸುಮಯ್ಯ ವಂದಿಸಿದರು. ಉಪನ್ಯಾಸಕಿ ಕುಮಾರಿ ರಮ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *