ಬಂಟ್ವಾಳ : ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ಕಲ್ಲಡ್ಕ ರೇಂಜ್ ಇದರ ಪ್ರಥಮ ವಾರ್ಷಿಕ ಹಾಗೂ ವಾರ್ಷಿಕ ಮಹಾಸಭೆಯು ಎಸ್‍ಕೆಐಎಂವಿ ಮುಫತ್ತಿಶ್ ಉಮರುಲ್ ಫಾರೂಕ್ ದಾರಿಮಿ ತೆಕ್ಕಾರು ಇವರ ಅಧ್ಯಕ್ಷತೆಯಲ್ಲಿ ರೇಂಜಿನ ಕೇಂದ್ರ ಮದ್ರಸ ಕಲ್ಲಡ್ಕ ಮುನೀರುಲ್ ಇಸ್ಲಾಂ ಮದ್ರಸಲ್ಲಿ ಇತ್ತೀಚೆಗೆ ನಡೆಯಿತು. ಸ್ಥಳೀಯ ಮುದರ್ರಿಸ್ ಬಹು. ಇಸ್ಮಾಯಿಲ್ ಫೈಝಿ ಉದ್ಘಾಟಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ಬಿ.ಟಿ. ಮುಹಮ್ಮದ್ ಇಕ್ಬಾಲ್ ದಾರಿಮಿ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. 

ಅಧ್ಯಕ್ಷರಾಗಿ ಟಿ.ಪಿ. ಜಮಾಲುದ್ದೀನ್ ದಾರಿಮಿ ಗಡಿಯಾರ, ಉಪಾಧ್ಯಕ್ಷರಾಗಿ ಜೆ.ಪಿ. ಅಬೂಬಕ್ಕರ್ ಫೈಝಿ ಬುಡೋಳಿ, ಎಸ್.ಎ. ಇಸ್ಮಾಯಿಲ್ ಫೈಝಿ ಗೋಲ್ತಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಟಿ. ಮುಹಮ್ಮದ್ ಇಕ್ಬಾಲ್ ದಾರಿಮಿ ಕಲ್ಲಡ್ಕ, ಜೊತೆ ಕಾರ್ಯದರ್ಶಿಗಳಾಗಿ ಎನ್.ಎ. ಹೈದರ್ ದಾರಿಮಿ ಕೆ.ಸಿ.ರೋಡು, ಕೆ.ವಿ. ಅಬ್ದುಲ್ ಜಲೀಲ್ ಫೈಝಿ ಬೋಳಂತೂರು, ಕೋಶಾಧಿಕಾರಿಯಾಗಿ ಅಬ್ದುಲ್ ಹಾಜಿ ಗೋಲ್ಡನ್, ಪರೀಕ್ಷಾ ಮಂಡಳಿ ಚೆಯರ್‍ಮೆನ್ ಆಗಿ ಎನ್.ಬಿ. ಇಬ್ರಾಹಿಂ ದಾರಿಮಿ ಕೆ.ಸಿ.ರೋಡು, ವೈಸ್ ಚೆಯರ್‍ಮೆನ್‍ಗಳಾಗಿ ಎಸ್. ಅಬ್ದುಲ್ ರಹಿಮಾನ್ ದಾರಿಮಿ ಸತ್ತಿಕಲ್ಲು, ಅಬ್ದುಲ್ಲಾ ಮುಸ್ಲಿಯಾರ್ ಕರಾಯ, ಎಸ್‍ಕೆಎಸ್‍ಬಿವಿ ಚೆಯರ್‍ಮೆನ್ ಆಗಿ ನೌಫಲ್ ಅಹ್ಮದ್ ಕೌಸರಿ ಆಲಂಪಾಡಿ, ಕನ್ವೀನರ್ ಆಗಿ ರಜಬ್ ಫೈಝಿ ಬೋಳಂತೂರು, ಮುಅಲ್ಲಿಂ ಕ್ಷೇಮ ನಿಧಿ ಫಂಡ್ (ರಿಲೀಫ್ ಸೆಲ್) ಚೆಯರ್‍ಮೆನ್ ಆಗಿ ಸಿದ್ದೀಕ್ ಫೈಝಿ ಪಾರ್ಪಕಜೆ, ಸದಸ್ಯರಾಗಿ ಅಬ್ದುಲ್ ಮಜೀದ್ ದಾರಿಮಿ ಏನಾಜೆ, ಇಸ್ಹಾಕ್ ಮುಸ್ಲಿಯಾರ್ ಗಡಿಯಾರ ಹಾಗೂ ರೇಂಜಿಗೊಳಪಟ್ಟ ಎಲ್ಲಾ ಮದ್ರಸಗಳ ಸದರ್ ಉಸ್ತಾದರುಗಳನ್ನು ಆರಿಸಲಾಯಿತು. ಟಿ.ಪಿ. ಜಮಾಲುದ್ದೀನ್ ದಾರಿಮಿ ಸ್ವಾಗತಿಸಿ, ನೌಫಲ್ ಅಹ್ಮದ್ ಕೌಸರಿ ವಂದಿಸಿದರು. ಸ್ವದಖತುಲ್ಲಾ ಮುಸ್ಲಿಯಾರ್ ಕಿರಾಅತ್ ಪಠಿಸಿದರು.

