ಬಂಟ್ವಾಳ: ಜ್ಞಾನವಿಕಾಸ ಕೇಂದ್ರದಿಂದ ಸಾಕಷ್ಟು ಬದಲಾವಣೆಗಳಾಗಿದ್ದು, ಹುಟ್ಟಿನಿಂದ ಸಾಯುವವರೆಗೆ ಜೀವನದಲ್ಲಿ ಇರಬೇಕಾದ ಮೌಲ್ಯಗಳನ್ನು ಕಲಿಸುವುದು ಜ್ಞಾನವಿಕಾಸಕೇಂದ್ರ ಮಹಿಳೆಯರಿಗೆ ಶೇ 33% ಮೀಸಲಾತಿ ಸರಕಾರದ ನಿಯಮವಿದ್ದರೆ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಶೇ 75%ರಷ್ಟು ಮಹಿಳಾ ಸಿಬ್ಬಂದಿಗಳಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ್ ಕೆ ಹೇಳಿದ್ದಾರೆIMG-20170801-WA0034

IMG-20170801-WA0035.

ಬಾಳೆಪುಣಿ ಶ್ರೀ ತೋಡಕುಕ್ಕಿನ್ನಾರ್ ಕಣಂತೂರು ರಂಗಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಂಟ್ವಾಳ ಶ್ರೀ ವೈದ್ಯನಾಥೇಶ್ವರ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿ ಹಂತದಲ್ಲೂ ಮಹಿಳೆಗೆ ನೀಡುವ ಮಾಹಿತಿ ತರಬತಿಗಳು ಮುಂದೊಂದು ದಿನ ಪುರುಷರಿಗೆ ನೀಡುವ ಪರಿಸ್ಥಿತಿ ಬರಬಹುದು ಎಂದರು.
ಹೆಣ್ಣುಮಕ್ಕಳು ಮದುವೆಯ ಬಳಿಕ ಸಂಸಾರದ ಭಾರದಿಂದ ಎಲ್ಲ ಆಸಕ್ತಿಗಳನ್ನು ಕಳೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಮನಸ್ಸಿನ ದುಗುಡವನ್ನು ಹೊರಹಾಕಲು ಜ್ಞಾನವಿಕಾಸ ಕೇಂದ್ರ ಸಹಕಾರಿಯಾಗುತ್ತದೆ. ಕಲಿಯುವುದಕ್ಕೆ ವಯಸ್ಸಿನ ಮಿತಿ ಇಲ್ಲ ತಂತ್ರಜ್ಞಾನದಲ್ಲಿ ಎಷ್ಟೂ ಮುಂದುವರಿಯಬಹುದು. ಆದರೆ ಹೊಟ್ಟೆಗೆತಿನ್ನುವಆಹಾರತಂತ್ರಜ್ಞಾನದಿಂದ ಸಾಧ್ಯವಿಲ್ಲ ಎಂದರು.
ಮುಖ್ಯ ಅತಿಥಿಯಾಗಿದ್ದ ಪೂಪಾಡಿಕಲ್ಲು ಶಾಲೆಯ ಮುಖ್ಯ ಶಿಕ್ಷಕಿ ಸುನಂದ ಕೌಟುಂಬಿಕ ಸಾಮರಸ್ಯದ ಕುರಿತು ಮಾಹಿತಿ ನೀಡಿದರು. ಯಾವುದಾದರೂ ಅಭ್ಯಾಸ ಮೂಡಿಸಬೇಕಾದರೆ ಮಕ್ಕಳಿಗೆ ಪ್ರತಿದಿನ ತಿಳಿಸಿಕೊಡಬೇಕಾಗುತ್ತದೆ ಆದರೆ ಮಹಿಳೆಯರಿಗೆ ಅಭ್ಯಾಸ ಮೂಡಿಸಬೇಕಾಗಿಲ್ಲ. ಮಕ್ಕಳು ಸಣ್ಣವರಿರುವಾಗಲೇ ಉತ್ತಮರ ಸಹವಾಸ ಮೂಡಿಸಬೇಕು. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕೆಂದರು. ಸಭಾಧ್ಯಕ್ಷತೆಯನ್ನು ರವಿಚಂದ್ರ ಆಚಾರ್ಯ ವಹಿಸಿದ್ದರು. ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾದ ಸೀತರಾಮ ಗಟ್ಟಿ, ಒಕ್ಕೂಟದ ಕಾರ್ಯದರ್ಶಿ ನವೀನ್‍ಚಂದ್ರಕೊಡಂಬೆಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಂತಿ ಉಪಸ್ಥಿತರಿದ್ದರು. ಜಯಶ್ರೀ ನಿರೂಪಿಸಿ ಮಲ್ಲಿಕಾ ಸ್ವಾಗತಿಸಿದರು. ಈ ಸಂದರ್ಭ ಮಹಿಳೆಯರಿಗೆ ವಿವಿಧ ಸ್ಪರ್ಧಿಗಳನ್ನು ಆಯೋಜಿಸಲಾಗಿತ್ತು.

By suddi9

Leave a Reply

Your email address will not be published. Required fields are marked *