ಮೀರತ್ : ಹರಿದ್ವಾರದ ಗೋಲ್ಡನ್ ಬಾಬಾ ೧೪ ಕೆಜಿ ಚಿನ್ನಾಭರಣ ತೊಟ್ಟು ತಮ್ಮ ಶಿಷ್ಯರೊಂದಿಗೆ ಹರಿದ್ವಾರದ ಕಾವಡ ಯಾತ್ರೆ ಕೈಗೊಂಡಾಗ ಹಾದಿಯುದ್ದಕ್ಕೂ ಇವರನ್ನು ನೋಡಲು ಜನ ಮುತ್ತಿಕೊಳ್ಳುವುದು ಸಾಮಾನ್ಯ. ಈ ಬಾರಿ ಯಾತ್ರೆಗೆ ಬಾಬಾ ಅವರು ಮತ್ತೆ ೨ ಕೆ.ಜಿ ತೂಕದ ಚಿನ್ನದ ಸರವನ್ನು ಧರಿಸಿ ಯಾತ್ರೆ ಕೈಗೊಂಡು ಗಮನ ಸೆಳೆದಿದ್ದಾರೆ.
ಹರಿದ್ವಾರ ಯಾತ್ರೆ ಕೈಗೊಳ್ಳುವ ಬಹುತೇಕ ಎಲ್ಲ ’ಕನ್ವಾರಿಯಾ’ಗಳ ಬಾಯಲ್ಲಿ ’ಗೋಲ್ಡನ್ ಬಾಬಾ’ ಹೆಸರು ಕೇಳಿಬರುತ್ತಿದ್ದು, ಅಲ್ಲದೇ ಈ ಸ್ವಾಮೀಜಿಗೆ ಯಾವ ಪ್ರಧಾನಿ, ರಾಷ್ಟ್ರಪತಿಗಳಿಗೆ ಕಡಿಮೆ ಯಿಲ್ಲದಂತೆ ಭದ್ರತೆ ಇರುತ್ತದೆ. ಇದರಲ್ಲೇ ವಿಶೇಷ ಎಂದರೆ, ಇವರು ಬರೋಬ್ಬರಿ ೧೪ ಕೆಜಿ ತೂಕದ ಚಿನ್ನದ ಒಡವೆ ಧರಿಸಿ ಕೊಂಡಿದ್ದಾರೆ. ಇದರ ಮೌಲ್ಯ ೪-೫ ಕೋಟಿ ರೂ. ಅಧಿಕ ಇದಕ್ಕಾಗಿ ಅವರು ಗೋಲ್ಡನ್ ಬಾಬಾ ಎಂದು ಖ್ಯಾತಿಯಾಗಿದ್ದಾರೆ. ಐಷರಾಮಿ ಕಾರಿನಲ್ಲಿ ಶಿಷ್ಯಬಳಗದ ಭದ್ರತೆ ಯೊಂದಿಗೆ ಯಾತ್ರೆ ಕೈಗೊಂಡಿದ್ದಾರೆ. ಇದಕ್ಕಾಗಿ ೧ ಕೋಟಿ ರೂ. ವ್ಯಯಿಸುತ್ತಿದ್ದಾರೆ.
ಹರಿದ್ವಾರದಿಂದ ದೆಹಲಿವರೆಗೂ ಕೈಗೊಳ್ಳುವ ೨೦೦ ಕಿಮೀ ದೂರದ ಕಾವಡ ಯಾತ್ರೆ ವೇಳೆ ಬಾಬಾ ಅವರು ೧೪.೫ಕೆಜಿ ತೂಕದ ಚಿನ್ನಾಭರಣ ತೊಟ್ಟು ಹೊರಟಿದ್ದರು. ಅವರ ಸಂಗ್ರಹದಲ್ಲಿ ೨೧ ಚಿನ್ನದ ಸರ, ೨೧ ಲಾಕೆಟ್ಸ್ ಹಾಗೂ ಚಿನ್ನದ ಜಾಕೆಟ್‌ನ್ನು ಧರಿಸಿದ್ದಾರೆ. ಆದರೆ ಈ ಬಾರಿ ಶಿವನ ಲಾಕೆಟ್‌ವುಳ್ಳ ಹೊಸ ಚಿನ್ನದ ಸರವನ್ನು ಯಾತ್ರೆ ಉದ್ದಕ್ಕೂ ಧರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಬಾಬಾ ಇದು ನನ್ನ ನರಗಳಿಗೆ ಸಮಸ್ಯೆ ಉಂಟು ಮಾಡಲಿದೆ. ನನ್ನ ಕಣ್ಣುಗಳಿಗೂ ತೊಂದರೆ ಆಗಲಿದೆ ಹಾಗಾಗಿ ಅದನ್ನು ಧರಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗೂ ೨೦೧೮ರ ಕಾವಡ ಯಾತ್ರೆಯೇ ಕೊನೆ ಯಾತ್ರೆಯಾಗಬಹುದು ಎಂದು ಹೇಳಿದ್ದಾರೆ.ತಮ್ಮನ್ನು ’ಗೋಲ್ಡನ್ ಬಾಬಾ’ ಎಂದು ಕರೆದುಕೊಂಡಿರುವ ಉತ್ತರಪ್ರದೇಶದ ಮುಜಫರ್ನಗರ ಮೂಲದ ಗೋಲ್ಡನ್ಪುರಿ ಮಹಾರಾಜ್ ಅಲಿಯಾಸ್ ಗೋಲ್ಡನ್ ಬಾಬಾ ಅವರ ಕಾವಲಿಗೆ ೨೫ ಮಂದಿ ಅನುಯಾಯಿಗಳ ಒಂದು ತಂಡವೂ ಇದೆ. ಜೊತೆಗೆ ಪೊಲೀಸರು ಭದ್ರತೆ ನೀಡುತ್ತಿದ್ದಾರೆ. ನಡೆದಾಡುವ ಚಿನ್ನದಂಗಡಿ ಎಂದೇ ಜನಪ್ರಿಯರಾಗಿರುವ ಗೋಲ್ಡನ್ ಬಾಬಾ ಹಲವಾರು ಚಿನ್ನದ ಲಾಕೆಟ್, ತೋಳ್ಬಂದಿ, ಮುತ್ತು, ರತ್ನ, ವಜ್ರ, ವೈಡೂರ್ಯಗಳ ಉಂಗುರುಗಳು ಸೇರಿ ಒಟ್ಟು ೧೪.೫ ಕೆ.ಜಿ ಚಿನ್ನಾಭರಣ ತೊಡುತ್ತಾರೆ. ಬಾಬಾ ಅವರ ವಜ್ರಖಚಿತ ವಾಚ್ ಬೆಲೆ ೨೭ ಲಕ್ಷರೂ. ಹಾಗೂ ಇವರು ಒಂದು ಬಿಎಂಡಬ್ಲೂ, ೨ ಆಡಿ, ೩ ಫಾರ್ಚುನರ್ ಕಾರನಲ್ಲಿ ಯಾತ್ರೆ ಕೈಗೊಂಡಿದ್ದಾರೆ.ಬಾಬಾ ಅವರ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ, ಕುತೂಹಲದಿಂದ ಅವರನ್ನು ಕಾಣಲು ಬರುವವರ ಸಂಖ್ಯೆಯೂ ಹೆಚ್ಚಿದೆ. ಯಾತ್ರೆ ಮಾರ್ಗದಲ್ಲಿ ಹಲವು ನಗರ ಹಾಗೂ ಪಟ್ಟಣಗಳಲ್ಲಿ ಬಿಡಾರ ಹೂಡುವ ಬಾಬಾ ಅವರನ್ನು ಕಾಣಲು ಜನ ಸಾಗರ ಹರಿದುಬರುತ್ತಿದ್ದು, ಜನರನ್ನು ನಿಯಂತ್ರಿಸಲು ೨೫ ಪೊಲೀಸರು ನಿಯೋಜನೆಗೊಂಡಿದ್ದಾರೆ.ದೆಹಲಿ ಮೂಲಕ ಗಾರ್ಮೆಂಟ್ಸ್ ಉದ್ಯಮಿಯಾಗಿರುವ ಇವರು ಸನ್ಯಾಸ ಸ್ವೀಕರಿಸಿದ್ದರು. ಪೊಲೀಸರಲ್ಲದೇ ಮಿನಿ ಟ್ರಕ್ನಲ್ಲಿ ಸುಮಾರು ೨೦೦ ಅನುಯಾಯಿಗಳು ಅವರ ಜತೆ ಇದ್ದಾರೆ. ದಿಲ್ಲಿಯ ಮಾಜಿ ಉದ್ಯಮಿ, ಗೋಲ್ಡನ್ ಬಾಬಾ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಯಾತ್ರೆ ಕೈಗೊಳ್ಳುತ್ತಾರೆ.
