ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ನಿರೀಕ್ಷೆಯಂತೆ ರಾಮನಾಥ್‌ ಕೋವಿಂದ್‌ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಮುಗಿದಿದ್ದು, ಕೇಂದ್ರ ಚುನಾವಣಾ ಆಯೋಗ ಅಧಿಕೃತವಾಗಿ ರಾಮನಾಥ್ ಕೋವಿಂದ್‌ ಗೆಲುವು ಘೋಷಿಸಿದೆ.ರಾಮನಾಥ್‌ ಕೋವಿಂದ್‌ 7,02,644 ಮತ ಅಂದರೆ ಶೇ 65.65ರಷ್ಟು ಮತ ಪಡೆದುಕೊಂಡಿದ್ದು, ಮೀರಾ ಕುಮಾರ್‌ 1,67,314 ಮತ ಅಂದರೆ ಶೇ 34.35ರಷ್ಟು ಮತ ಪಡೆದಿದ್ದಾರೆ.ramanath akki

ಇವರಿಬ್ಬರ ನಡುವೆ ಬರೋಬ್ಬರಿ 3.34,730 ಮತಗಳ ಅಂತರವಿದೆ. ಕೋವಿಂದ್‌ ಗೆಲುವು ಖಚಿತವಾಗುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ.ಜುಲೈ 21ರಂದು 71 ವರ್ಷದ ರಾಮನಾಥ್‌ ಕೋವಿಂದ್‌ ದೇಶದ 14ನೇ ರಾಷ್ಟ್ರಪತಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಜುಲೈ 17 ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಮತ್ತು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ನಡುವೆ ಪೈಪೋಟಿ ನಡೆದಿತ್ತು. ಇಬ್ಬರು ದಲಿತ ಮುಖಂಡರು ಎಂಬುದು ಗಮನಾರ್ಹ.

By suddi9

Leave a Reply

Your email address will not be published. Required fields are marked *