ಮಂಗಳೂರು : ಗುರುಪುರದ ಬಂಡಸಾಲೆಯಿಂದ ಚಿಲಿಂಬಿಗುಡ್ಡೆ, ಕಲ್ಲಕಲ್ಲಂಬಿ, ಕಾಮಕ್ಕೆ ಸಂಪರ್ಕ ಕಲ್ಪಿಸುವ 2.04 ಕಿಮೀ ಅಂತರದ ರಸ್ತೆ ಕಾಂಕ್ರೀಟೀಕರಣ ಶೀಘ್ರವೇ ಆರಂಭವಾಗಲಿದೆ ಎಂದು ಗುರುಪುರ ಗ್ರಾಮ ಪಂಚಾಯತ್ ಮೂಲವೊಂದು ತಿಳಿಸಿದೆ.ಇದು 2.3 ಕೋಟಿ ರೂ ವೆಚ್ಚದ ಕಾಮಗಾರಿಯಾಗಿದೆ. ಇದಕ್ಕೆ ಟೆಂಡರ್ ಮಂಜೂರಾತಿ ನೀಡಲಾಗಿದ್ದು, ಕರಾರುಪತ್ರ ಪ್ರಗತಿಯಲ್ಲಿದೆ. ಗುತ್ತಿಗೆದಾರ ಅಶೋಕ್ ಕಾಮಗಾರಿ ನಡೆಸಲಿದ್ದಾರೆ. ಇದು ಸಿಎಂ ಗ್ರಾಮೀಣ ಸಡಕ್ ಯೋಜನೆ(ಸೀಎಂಜಿಎಸ್ವೈ) ಅನುದಾನಡಿ ನಿರ್ಮಾಣವಾಗುವ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯಾಗಿದೆ.
ಮಳೆ ತಗ್ಗದ ತಕ್ಷಣದಿಂದ ಕೆಲಸ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಜಿ ಪಂ, ತಾ ಪಂ ಹಾಗೂ ಗ್ರಾ ಪಂ ಸದಸ್ಯರು ಪ್ರಯತ್ನ ಮುಂದುವರಿಸಿದ್ದಾರೆ.
