ಸುದ್ದಿ9 ಕೈಕಂಬ: ಗುರುಪುರ ಕೈಕಂಬ ಪೇಟೆಯ ಸಮೀಪದ ಮನೆಯೊಂದರಿಂದ ಕಳ್ಳರು ವಜ್ರ ಹಾಗೂ ಅಪಾರ ಮೌಲ್ಯದ ಚಿನ್ನಾಭರಗಳನ್ನು ಕಳವು ಮಾಡಿದ ಘಟನೆ ನಡೆದಿದೆ.
29ರಂದು ಮಂಗಳವಾರ ಸಂಜೆ 3.30 ರಿಂದ ರಾತ್ರಿ 1230ರ ಒಳಗೆ ನಡೆದಿದೆ ಎನ್ನಲಾಗಿದೆ.
ಗುರುಪುರ ಕೈಕಂಬ ನಿವಾಸಿ ಇಸ್ಮಾಯಿಲ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಮೂರು ಲಕ್ಷ ಮೌಲ್ಯದ ವಜ್ರದ ಒಡವೆ, ಮೂರು ಪವನ್ ಚಿನ್ನದ ಸರ, ಒಂದು ಚಿನ್ನದ ಬ್ರೇಸ್ಲೆಟ್, ಆರು ಸಾವಿರ ರೂ. ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಕಳವಾಗಿವೆ. ಈದ್ ಹಬ್ಬದ ಪ್ರಯುಕ್ತ ಇಸ್ಮಾಯಿಲ್ ಮನೆಮಂದಿಯ ಜೊತೆ ಮಂಗಳವಾರ ಮಧ್ಯಾಹ್ನ ಬಿಸಿರೋಡ್ನ ತನ್ನ ತಂಗಿಯ ಮನೆಗೆ ಹೋಗಿದ್ದರು. ರಾತ್ರಿ 1 ಗಂಟೆಗೆ ಮನೆಗೆ ವಾಪಸ್ ಆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿ ಸಿ.ಸಿ ಕ್ಯಾಮರ ಅಳವಡಿಸಿದ್ದರು ಅಂದು ಕ್ಯಾಮರ ಚಾಲನೆ ಇಲ್ಲದ ಕಾರಣ ಯಾವುದೇ ಗುರುತು ಪತೆ ಹಚ್ಚಲು ಸಾಧ್ಯವಾಗಲಿಲ್ಲ
ಕಳ್ಳರು ಮನೆಮಂದಿ ಇಲ್ಲದ ಸಂದರ್ಭವನ್ನು ಬಳಸಿಕೊಂಡು ಕೃತ್ಯವೆಸಗಿದ್ದು ಸ್ಥಳೀಯರ ಕೃತ್ಯಮಾಡಿರ ಬಹುದೆಂದು ಶಂಕಿಸಲಾಗಿದೆ. ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆರಳಚ್ಚುದಳ, ಶ್ವಾನದಳ ಭೇಟಿ ನೀಡಿದೆ.
ಇತ್ತೀಚೆಗೆ ಕೈಕಂಬದಲ್ಲಿ ಕಳ್ಳರ ಕಾಟ ಮಿತಿಮೀರಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ
