ಕಲ್ಲಡ್ಕ: ಶ್ರೀರಾಮ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸುಧೆಕ್ಕಾರಿನಲ್ಲಿರುವ ಗದ್ದೆಯಲ್ಲಿ ಕೃಷಿ ಚಟುವಟಿಕೆ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭತ್ತದ ನಾಟಿ ಮಾಡುವ ವಿಧಾನವನ್ನು ಕಲಿತರು. ಹಾಗೂ ಕೆಸರು ಗದ್ದೆಯಲ್ಲಿ ಅತ್ಯಂತ ಉಲ್ಲಾಸ, ಉತ್ಸಾಹದಿಂದ ಭಾಗವಹಿಸಿ ಕೃಷಿಯ ಮಹತ್ವವನ್ನು ತಿಳಿದರು. 
ಈ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಡಾ|ಕಮಲಾ ಪ್ರಭಾಕರ ಭಟ್, ರಮೇಶ್ ಎನ್ ಮುಖ್ಯೋಪಾಧ್ಯಾಯರು ಶ್ರೀರಾಮ ಪ್ರೌಢಶಾಲೆ, ರವಿರಾಜ್ ಕಣಂತೂರು ಮುಖ್ಯೋಪಾಧ್ಯಾಯರು ಶ್ರೀರಾಮ ಪ್ರಾಥಮಿಕ ಶಾಲೆ, ಪದ್ಮನಾಭ ಪಿ.ಕೆ, ಜಯರಾಮ ಸುಧೆಕ್ಕಾರು ಮತ್ತು ಶಿಕ್ಷಕರಾದ ಜಿನ್ನಪ್ಪ ಏಳ್ತಿಮಾರ್, ಕುಶಾಲಪ್ಪ ಅಮ್ಟೂರು, ಸಂಕಪ್ಪ ಬರಿಮಾರು, ವಿಜೇತಾ, ಕು.ಸೇವಂತಿನಿ ಉಪಸ್ಥಿತರಿದ್ದು ಯೋಗ್ಯ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.ಈ ಕಾರ್ಯಕ್ರಮವನ್ನು ಶ್ರೀರಾಮ ಪ್ರೌಢಶಾಲಾ ವೃತ್ತಿ/ರೈತ ವಿದ್ಯಾರ್ಥಿ ಸಂಘ, ಕರಕುಶಲ ಸಂಘದ ಸದಸ್ಯರು ಸಂಯೋಜಿಸಿದರು.
