ಬಂಟ್ವಾಳ :ಬಿಜೆಪಿ ಸ್ಥಾನೀಯ ಸಮಿತಿ ಬಂಟ್ವಾಳ ಮತ್ತು ಸಂಸದ ನಳೀನ್ ಕುಮಾರ್ ವತಿಯಿಂದ ಮೊನ್ನೆ ದುಷ್ಕರ್ಮಿಗಳ ಧಾಳಿಯಿಂದ ಹತನಾದ ಶರತ್ ಇವರ ಕುಟುಂಬದವರಿಗೆ 5ಲಕ್ಷ ರುಪಾಯಿಯ ನೆರವನ್ನು ಘೋಷಿಸಲಾಯಿತು.ಬಂಟ್ವಾಳದ ಭಾಜಾಪ ಪಕ್ಷದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರಾಜೇಶ್ ನಾಯ್ಕರವರು ಹಿಂದಿನಿಂದಲೂ ದೇಶದಲ್ಲಿ ಕಾಂಗ್ರೆಸ್ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು ಹಲವಾರು ಅಮಾಯಕರ ಹತ್ಯೆಯಾದರೂ ಕಣ್ಣುಮುಚ್ಚಿ ಕುಳಿತಿದೆ ಎಂದರು.bjp pressmeet at party office
.

ಬಂಟ್ವಾಳದಲ್ಲಿ ನಡೆದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:

1975ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಈ ದೇಶದಲ್ಲಿ ತುರ್ತುಪರಿಸ್ಥಿತಿಯಲ್ಲಿ ಹೇರುವ ಮೂಲಕ ವಿರೋದಿಗಳನ್ನು ದಮನಿಸುವ ಕೆಲಸವನ್ನು ಮಾಡಿದರು.ರಾತ್ರೋತ್ರಿ ತನ್ನ ವಿರೋಧಿಗಳನ್ನು ಜೈಲಿಗೆ ಅಟ್ಟಲಾಯಿತು. ಈದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪರೋಕ್ಷವಾಗಿ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಿಸಿ ವಿರೋಧ ಪಕ್ಷವನ್ನು ದಮನಿಸುವ ಕೆಲಸವನ್ನು ಮಾಡುತ್ತಿದೆ.ಅದಕ್ಕಾಗಿ ಈ ಜಿಲ್ಲೆಯನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿದೆ. ಅಧಿಕಾರಿಗಳನ್ನು ಬಳಸಿಕೊಂಡು ಅವರಿಗೆ ಒತ್ತಡ ಹೇರಿ ಸರ್ವಾಧಿಕಾರಿ ವರ್ತನೆಯ ಮೂಲಕ ತನ್ನ ಅಜಂಡವನ್ನು ಜಾರಿ ಮಾಡಲು ಯತ್ನಿಸುತ್ತದೆ.
ಮುಖ್ಯಮಂತ್ರಿಯವರ ಮತ್ತು ಉಸ್ತುವಾರಿ ಸಚಿವರ ಬೇಜವಾಬ್ದಾರಿ ಹೇಳಿಕೆಗಳು ಮತ್ತು ಅಧಿಕಾರಿಗಳ ಮೇಲೆ ಹಸ್ತಕ್ಷೇಪ ಇವತ್ತಿನ ಪರಿಸ್ಥಿತಿಗೆ ಕಾರಣವಾಗಿದೆ. ಆಡಳಿತ ನಡೆಸುವವರ ಒತ್ತಡದಿಂದಾಗಿ ಇಲಾಖೆಗೆ ನಿಸ್ಪಕ್ಷವಾಗಿ ಕೆಲಸ ಮಾಡಲು ಅಸಾಧ್ಯವಾಗಿದೆ.
ಕರೋಪಾಡಿಯಲ್ಲಿ ಜಲೀಲ್ ಹತ್ಯಾ ಪ್ರಕರಣದಲ್ಲಿ ನೈಜ ಆರೋಪಿಗಳ ಬಂಧನವಾಗಿಲ್ಲ ತಕ್ಷ ನೈಜ ಆರೋಪಿಗಳನ್ನು ಬಂಧಿಸಬೇಕು ಎಂಬುದಾಗಿ ಓರ್ವ ಪಂಚಾಯತ್ ಸದಸ್ಯನ ಹೆಸರನ್ನು ಉಲ್ಲೇಖಿಸಿ ಮೃತನ ತಂದೆ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿರುವುದನು ಸಚಿವರು ಮರೆತಿರುವರೇ?
ಕಲ್ಲಡ್ಕದಲ್ಲಿ ಮೇ 26ರಂದು ನಡೆದ ಪ್ರಕರಣದ ದಿನವೇ ರಾತ್ರಿ ಮೆಲ್ಕಾರ್‍ನಲ್ಲಿ ಪವನ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈವರೆಗೇ ಆರೋಪಿಗಳ ಬಂಧನವಾಗಿಲ್ಲ.
ಆಶ್ರಫ್ ಕೊಲೆ ಪ್ರಕರಣದಲ್ಲಿ ಹಿಂದು ಯುವಕರ ಬಂಧನವಾಗಿದೆ.
ಜುಲೈ 7ರಂದು ಅಡ್ಯಾರ್‍ನಲ್ಲಿ ನಡೆದ ಸಾಜಿದ್ ಎಂಬ ಯುವಕನ ಹಲ್ಲೆ ಪ್ರಕರಣದಲ್ಲಿ ಮೂರು ಮಂದಿ ಹಿಂದು ಯುವಕರ ಬಂಧವಾಗಿದೆ.
ಜುಲೈ 9ರಂದು ಮಂಗಳೂರು ತಾಲೂಕಿನ ಕುತ್ತಾರು ಎಂಬಲ್ಲಿ ಚಿರಂಜೀವಿ ಎಂಬ ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದು ಈ ವರೆಗೆ ಯಾರೊಬ್ಬರ ಬಂಧನವಾಗಿಲ್ಲ.
ಶರತ್ ಹತ್ಯೆ ಪ್ರಕರಣದಲ್ಲಿ ಪ್ರಕರಣ ನಡೆದು 9 ದಿನ ಕಳೆದರೂ ಈವರೆಗೆ ಆರೋಪಿಗಳನ್ನು ಬಂಧಿಸಲು ಇಲಾಖೆಗೆ ಸಾಧ್ಯವಾಗಿಲ್ಲ.
ಮೇ27ರಿಂದ ಪ್ರಾರಂಭದಲ್ಲಿ ಬಂಟ್ವಾಳ ಆ ಬಳಿಕ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದು ಜುಲೈ 4ರಂದು ಮಂಗಳೂರು ತಾಲೂಕಿನ ಸೆಕ್ಷನ್ 144 ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಮಿತ ಹಿಂಪಡೆಯಲಾಯಿತು. ಒಂದು ವೇಳೆ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಅನಪೇಕ್ಷಿತ ಘಟನೆಗಳು ಸಂಭವಿಸಿಲ್ಲ ಎನ್ನುವ ಕಾರಣಕ್ಕಾಗಿ ಸೆಕ್ಷನ್ ಹಿಂಪಡೆದಿದ್ದಾರೆ ಸುಳ್ಯ, ಪುತ್ತೂರು,ಬೆಳ್ತಂಗಡಿ ತಾಲೂಕಿನಲ್ಲಿ ಮುಂದುವರಿಸಲು ಕಾರಣವೇನು ?
ಒಂದು ಕಡೆ ನಿರಂತರ ಸೆಕ್ಷನ್ 144 ಹಾಕುವ ಮೂಲಕ ಜನರನ್ನು ಭಯಬೀತರನ್ನಾಗಿಸಿದರೆ ಮತ್ತೊಂದು ಕಡೆ ಸಂಘಟನೆಯ ಪ್ರಮುಖರ ಮೇಲೆ ಗಂಭೀರ ಪ್ರಕರಣದ ಕೇಸ್ ದಾಖಲಿಸುವ ಮೂಲಕ ಕಾರ್ಯಕರ್ತರ ಧೃತಿಗೆಡಿಸುವ ಹುನ್ನಾರ ಸರಕಾರ ಮಾಡುತ್ತಿದೆ.
ಜುಲೈ 8ರಂದು ಶರತ್ ಅಂತಿಮ ಯಾತ್ರೆಯ ಸಂದರ್ಭ ಶಾಂತಿಯುತವಾದ ಮೆರವಣಿಗೆ ಬಿ.ಸಿ.ರೋಡಿಗೆ ಬಂದಾಗ ಕಲ್ಲು ತೂರಾಟದ ಮೂಲಕ ಅಶಾಂತಿಗೆ ಕಾರಣವಾಯಿತು, ಕಲ್ಲು ತೂರಾಟದ ಬಗ್ಗೆ ವಿಡಿಯೋ ಕ್ಲಿಪಿಂಗ್‍ಗಳು ಸಾರ್ವಜನಿಕವಾಗಿ ಹರಿದಾಡುತ್ತಿದ್ದಾರು ಸಂಘಟನೆಗಳ ಪ್ರಮುಖರ ಮೇಲೆ ಕೇಸು ದಾಖಲಿಸಿದ್ದು ಯಾರ ಒತ್ತಡದಿಂದ.ಮೆರವಣಿಗೆ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಕೇಸ್ ದಾಖಲಿಸುವುದಾದರೇ ಅಶ್ರಫ್ ಅಂತಿಮ ಯಾತ್ರೆಯ ಸಂದರ್ಭ ಸೆಕ್ಷನ್ 144 ಉಲ್ಲಂಘನೆ ಮಾಡಿರುವ ಬಗ್ಗೆ ಸಂಘಟಕರ ಮೇಲೆ ಮತ್ತು ಅಸಂದರ್ಭದಲ್ಲಿ ಆದ ಗಲಭೆಗಳ ಬಗ್ಗೆ ಗಂಭಿರ ಪ್ರಕರಣ ದಾಖಲಿಸಲಾಗಿದಯೇ
2000ನೇ ಇಸವಿಯಲ್ಲಿ ಬಂಟ್ವಾಳದಲ್ಲಿ ನೆರದ ದಲಿತ ನಾಯಕ ಶಿವಪ್ಪ ಬಂಗೇರ ರವರ ಹತ್ಯೆಯಿಂದ ಹಿಡಿದು ಶರತ್ ರವರ ಹತ್ಯೆಯವರೆಗಿನ ಈ ಜಿಲ್ಲೆಯಲ್ಲಿ ನಡೆದ ಎಲ್ಲಾ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವ ಮೂಲಕ ಪ್ರಕರಣದ ಹಿಂದಿರುವ ಶಕ್ತಿಗಳನ್ನು ದಮನಿಸಲು ಬಂಟ್ವಾಳ ಕ್ಷೇತ್ರ ಬಿಜೆಪಿ ಒತ್ತಾಯಿಸುವುದು.
ಸರಕಾರ ಮತ್ತು ಉಸ್ತುವಾರಿ ಸಚಿವರು ಪೋಲೀಸ್ ಇಲಾಖೆಯ ಮೇಲಿನ ಹಸ್ತಕ್ಷೇಪವನ್ನು ನಿಲ್ಲಿಸಿ ಅವರನ್ನು ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು.

By Suddi9

Leave a Reply

Your email address will not be published. Required fields are marked *