ಬಜ್ಪೆ: ರಂಝಾನ್ ಹಬ್ಬದ ದಿನ ಖುಷಿಯಲ್ಲಿ ತನ್ಮಯನಾಗಿದ್ದ ಬೈಕ್ ಸವಾರ ಟಿಪ್ಪರ್ ಅಪಘಾತಕ್ಕೆ ಬಲಿಯಾದ ದಾರುಣ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಪೊಕರ್ೋಡಿ ಸಮೀಪದ ಚೆಕ್ಪೋಸ್ಟ್ ಬಳಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಂಭವಿಸಿದೆ. ಮೃತಪಟ್ಟ ಯುವಕನನ್ನು ಕರಂಬಾರ್ ನಿವಾಸಿ ಝಾಕಿರ್(18) ಎಂದು ಗುರುತಿಸಲಾಗಿದೆ.

bajpe accident (5)

bajpe accident (3)

bajpe accident (4)
ಘಟನೆಯ ವಿವರ: ಝಾಕೀರ್ ಕೆಎಸ್ಆರ್ಟಿಸಿ ಬಸ್ ಅನ್ನು ಓವರ್ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿ ಬರುತ್ತಿದ್ದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈತನ ಬೈಕ್ ಟಿಪ್ಪರ್ಗೆ ಸಿಲುಕಿ ರ್ಸತೆ ಬದಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ಈತನನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ ಆವಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ನಗರದ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಗಿದೆ.
ಈತ ಬಜ್ಪೆ ಮಸೀದಿಯಲ್ಲಿ ರಂಝಾನ್ ಹಬ್ಬದ ಪ್ರಾರ್ಥನೆ ಮುಗಿಸಿ ಮನೆಕಡೆಗೆ ಸಾಗಿಸುತ್ತಿದ್ದ. ಆದರೆ ರಂಝಾನ್ ಹಬ್ಬದ ಸಡಗರದಿಂದ ಮನೆ ಸೇರುವ ಧಾವಂತದಲ್ಲಿದ್ದ ಯುಬಕ ಹಬ್ಬದಂದೇ ಯುವಕ ಮಸಣ ಸೇರಿರುವುದು ಸ್ಥಳೀಯರ ಹಾಗೂ ಹೆತ್ತವರ ದುಃಖಕ್ಕೆ ಕಾರಣವಾಗಿದ್ದ ಕರಾಳ ಛಾಯೆ ಮೂಡಿದಂತಾಗಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *