ಮೂಡುಬಿದರೆ: ದರಗುಡ್ಡೆ ಗ್ರಾಮದ ಪಲ್ಕೆದ ಬೈಲು ಎಂಬಲ್ಲಿನ ವಿನ್ಸೆಂಟ್ ಡಿಮೆಲ್ಲೋ ಎಂಬವರಿಗೆ ಸೇರಿದ 90ಸಾವಿರ ರೂಪಾಯಿ ಮೌಲ್ಯದ 281 ಕೆ.ಜಿ ತೂಕದ ಸುಲಿದ ಅಡಿಕೆ ಹಾಗೂ 17 ಸಾವಿರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು ಕಳವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವು ಗೈದ ಇಬ್ಬರು ಸಹೋದರ ಆರೋಪಿಗಳನ್ನು ಪೊಲೀಸರು 24 ಗಂಟೆಗಳೊಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

mbd_july31_7 (1)
ಮೂಡುಮಾನರ್ಾಡು ಗ್ರಾಮದ ಕರುಣಾಕರ ಪೂಜಾರಿಯವರ ಪುತ್ರರಾದ ಪೈಂಟಿಂಗ್ ವೃತ್ತಿಯ ಮಾಡುತ್ತಿದ್ದಾ ದಿನೇಶ್ ಪೂಜಾರಿ (28) ಹಾಗೂ ಹರೀಶ್ ಪೂಜಾರಿ (26) ಬಂಧಿತ ಆರೋಪಿಗಳು. ಪ್ರಕರಣದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು ಆತನ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ. ಕೃಷಿಕ ವಿನ್ಸೆಂಟ್ ಡಿಮಿಲ್ಲೋ ಅವರು ಈ ವರ್ಷ ಬೆಳೆದ ತಲಾ 60 ಕೆ.ಜಿಯ 14 ಗೋಣಿ ಸಿಪ್ಪೆ ಸುಲಿದ ಅಡಿಕೆಯನ್ನು ಮಂಗಳವಾರ ಖಾಲಿ ಇದ್ದ ಸಹೋದರನ ಮನೆಯಲ್ಲಿ ಬೀಗ ಹಾಕಿ ಸಂಗ್ರಹಿಸಿಟ್ಟಿದ್ದರು. ಬುಧವಾರ ಬೆಳಿಗ್ಗೆ ವಿನ್ಸೆಂಟ್ ಡಿಮೆಲ್ಲೋ ಅವರ ಪುತ್ರ ಮಾನಿಶ್ ಡಿಮೆಲ್ಲೋ ಆ ಮನೆಯ ಬೀಗ ತೆಗೆಯಲು ಹೋದಾಗ ಮನೆಯ ಹಾಗೂ ಅಡಿಕೆ ಸಂಗ್ರಹಿಸಿಟ್ಟಿದ್ದ ಬೀಗ ಮುರಿದಿದ್ದು ಬಾಗಿಲು ತೆರೆದಿತ್ತು. ಪರಿಶಿಲಿಸಿದಾಗ 8 ಗೋಣಿ ಅಡಕೆ ಹಾಗೂ ಮನೆಯ ಹಾಲ್ನ ಶೋಕೆಸ್ನಲ್ಲಿದ್ದ ಸುಮಾರು 17 ಸಾವಿರ ರೂಪಾಯಿ ಮೌಲ್ಯದ ಎಲ್ಜಿ ಡಿವಿಡಿ, ಸ್ಯಾನಿಯೋ ಕಂಪೆನಿಯ ಒಂದು ಡೆಕ್ ಹಾಗೂ 2 ಸ್ಪೀಕರ್ ಕಳವಾಗಿತ್ತು. ಈ ಕುರಿತು ವಿನ್ಸೆಂಟ್ ಅವರು ಬುಧವಾರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸರ್ಕಲ್ ಇನ್ಸ್ಪೆಕ್ಟರ್ ಅನಂತಪದ್ಮನಾಭ ಮಾಹಿತಿ ಕಲೆ ಹಾಕುತ್ತಿದ್ದಾಗ ಮಂಗಳವಾರ ರಾತ್ರಿ ತಲೆ ಮರೆಸಿಕೊಂಡಿದ್ದ ಆರೋಪಿ ಈ ಪರಿಸರದಲ್ಲಿ ಬೈಕ್ನಲ್ಲಿ ಹಲವು ಬಾರಿ ಓಡಾಡಿರುವುದು ತಿಳಿದು ಬಂತು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದರು.

By suddi9

Leave a Reply

Your email address will not be published. Required fields are marked *