ಸುದ್ದಿ9ಮೂಡುಬಿದರೆ: ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಹಂಡೇಲಿನಲ್ಲಿರುವ ಗುಜರಾತ್ ಮೂಲದ ಉದ್ಯಮಿ ಮುಖೇಶ್ ಕುಮಾರ್ ಪಾಟಿಲ್ ಅವರ ಗೋಡೌನಿಂದ ಜೂನ್ 21ರಂದು ರಾತ್ರಿ ಸುಮಾರು 8.5 ಲಕ್ಷ ಮೌಲ್ಯದ ಕಾಳುಮೆಣಸು ಕಳ್ಳತನ ಪ್ರಕರಣದಲ್ಲಿ ಬಂಧಿತರ ಪೈಕಿ ಕಲ್ಲಮುಂಡ್ಕೂರಿನ ಹರೀಶ್ ಪೂಜಾರಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೆಲ್ಲಿಕಾರಿನ ಯೋಗಿ ಯಾನೆ ಯೋಗಿರಾಜ್(23),ವಾಲ್ಪಾಡಿಯ ನವೀನ್(30)ಕಲ್ಲಮುಂಡ್ಕೂರಿನ ಹರೀಶ್ ಪೂಜಾರಿ26), ಕಾಯರ್ಗುಂಡಿಯ ಯೋಗೀಶ್ ಸಾಲ್ಯಾನ್(26), ಸುಕೇಶ್ ಶೆಟ್ಟಿ(23), ಪುತ್ತೂರು ಪಲ್ಲತಡ್ಕದ ಪ್ರತಾಪ್ ರೈ(23) ಮತ್ತು ಕೋಟೆಬಾಗಿಲಿನ ಮಹೇಶ್(20) ಅನ್ನು ಮೂಡುಬಿದರೆ ಪೊಲೀಸರು ಬಂಧಿಸಿದ್ದರು. ಈ ಪೈಕಿ ಯೋಗಿ ಯಾನೆ ಯೋಗಿರಾಜ್ ಕೊಲೆ ಇನ್ನಿತರ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ.
ಕಾಳು ಮೆಣಸು ಕಳ್ಳತನದ ಬಳಿಕ ಬಂಟ್ವಾಳದ ಸಾಲೆತ್ತೂರಿನಲ್ಲಿರುವ ಚಿತ್ರನಟಿ ರಾಧಿಕಾ ಅವರ ಮನೆ ದರೋಡೆಗೂ ಈ ತಂಡ ಸಂಚು ರೂಪಿಸಿತ್ತು ಎನ್ನಲಾಗಿದೆ.
