ಸುದ್ದಿ9ಮೂಡುಬಿದರೆ: ಅನಿಯಮಿಯ ವಿದ್ಯುತ್ ಕಡಿತ ಮತ್ತು ವಿದ್ಯುತ್ ಪೂರೈಕೆ ಅಸ್ತವ್ಯಸ್ತದ ವಿರುದ್ಧ ಬಿಜೆಪಿ ರೈತ ಮೋಚರ್ಾದ ವತಿಯಿಂದ ಮೂಡುಬಿದರೆ ಮೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಕಳೆದ ಕೆಲವು ತಿಂಗಳಿನಿಂದ ಮೂಡುಬಿದರೆ ಮೆಸ್ಕಾಂನಿಂದ ಸರಬರಾಜು ಆಗುತ್ತಿರುವ ವಿದ್ಯುತ್ ವ್ಯವಸ್ಥೆ ತೀರಾ ಹದಗೆಟ್ಟಿದ್ದು ಗ್ರಾಹಕರು ಮತ್ತು ರೈತರು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಅಲ್ಲದೆ ಕಚೇರಿಯಲ್ಲಿ ಸರಿಯಾದ ಸಿಬಂಧಿಗಳಿಲ್ಲ ಇದರಿಂದಾಗಿ ಕೆಟ್ಟು ಹೋಗಿರುವ ಕರೆಂಟು ಲೈನ್ಗಳನ್ನು, ಟ್ರಾನ್ಸ್ಫರ್ಗಳನ್ನು ರಿಪೇರಿ ಮಾಡುವ ವ್ಯವಸ್ಥೆ ಇಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ವಾರಗಟ್ಟಲೆ ವಿದ್ಯುತ್ ವ್ಯವಸ್ಥೆ ಇಲ್ಲದೆ ಜನತೆ ಬೇಸತ್ತಿದ್ದಾರೆ. ಆದ್ದರಿಂದ ಗ್ರಾಹಕರಿಗೆ ಮತ್ತು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ತುತರ್ು ಕ್ರಮಕೈಗೊಳ್ಳಬೇಕು, ದಿನದ 24 ತಾಸು ವಿದ್ಯುತ್ ಸರಬರಾಜು ಮತ್ತು ಕನಿಷ್ಠ 8 ಗಂಟೆ 3ಪೇಸ್ ವಿದ್ಯುತ್ ನೀಡಿ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮೆಸ್ಕಾಂ ಶಾಖಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮೂಡುಬಿದರೆ ಬಿಜೆಪಿ ರೈತ ಮೋಚರ್ಾದ ಅಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದಶರ್ಿ ಪ್ರಸಾದ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಬಿಜೆಪಿ ಮುಖಂಡರುಗಳಾದ ಉಮಾನಾಥ ಕೋಟ್ಯಾನ್, ಕೆ.ಪಿ.ಜಗದೀಶ ಅಧಿಕಾರಿ, ಸುದರ್ಶನ ಎಂ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಲಕ್ಷ್ಮಣ್ ಪೂಜಾರಿ, ಪ್ರಸಾದ್, ದಿನೇಶ್ ಪೂಜಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

