ಸುದ್ದಿ9ಮೂಡುಬಿದರೆ: ನಾನು ಎನ್ನುವುದು ತನ್ನ ವ್ಯಕ್ತಿತ್ವದಿಂದ ಕಳಚಿಕೊಂಡಾಗ ಮಾತ್ರ ಮೋಕ್ಷ ಸಿಗುತ್ತದೆ ಎಂಬುದು ಸಂತ ಕನದಾಸರ ಸಂದೇಶವಾಗಿದೆ. ಅವರು ತನ್ನ ಅನುಭವದ ಜ್ಞಾನವನ್ನು ಇತರರಿಗೂ ಧಾರೆ ಎರೆದು ಬೆಳಕು ಕೊಟ್ಟವರು. ಪರ್ಯಾಯ ಜ್ಞಾನ ಮಾರ್ಗದ ಮೂಲಕ ಜನರಲ್ಲಿ ಪ್ರಜ್ಞೆ ಮತ್ತು ಅರಿವು ಮೂಡಿಸಿದ್ದರು ಎಂದು ಜನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಹೇಳಿದರು.
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಇದರ ವತಿಯಿಂದ ಧವಲಾ ಮಹಾವಿದ್ಯಾಲಯದ ಆಶ್ರಯದಲ್ಲಿ ಕಾಲೇಜಿನಲ್ಲಿ ಸೋಮವಾರ ನಡೆದ ಕನಕ ಸಂಸ್ಕೃತಿ ಕಮ್ಮಟ ಕುರಿತ ಸಂವಾದದಲ್ಲಿ ಮಾತನಾಡಿದರು. 98 ವರ್ಷ ಬದುಕಿದ್ದ ಕನಕದಾಸರು 318 ಕೀರ್ತನೆಗಳನ್ನು ಹಾಗೂ 4 ಕೃತಿಗಳನ್ನು ರಚಿಸಿದ್ದರು. ಅವರ ಕೀರ್ತನೆಗಳು ಜಾತ್ಯಾತೀತ, ವಣರ್ಾತೀತ ನಿಲುವು ಹೊಂದಿದ್ದು ಪುರೋಹಿತ ಶಾಹಿಯನ್ನು ವಿರೋಧಿಸುತಿತ್ತು. ಸಾಮಾಜಿಕ ಪಿಡುಗುಗಳನ್ನು ಅವರು ಸಹಿಸುತ್ತಿರಲಿಲ್ಲ. ಸಮಾಜಕ್ಕೆ ಅಂಟಿರುವ ಈ ಕಾಯಿಲೆಗಳಿಗೆ ತನ್ನ ಕೀರ್ತನೆ ಹಾಗೂ ಕೃತಿಗಳ ಮೂಲಕ ಔಷಧಿಯನ್ನು ಕೊಟ್ಟಿದ್ದರು ಎಂದರು.
ಡಿಜೆವಿವಿ ಸಂಘದ ಕಾರ್ಯದಶರ್ಿ ಅಭಿಜಿತ್ .ಎಂ ಕಮ್ಮಟ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಸಮನ್ವಯಾಧಿಕಾರಿ ಕಾ.ತ ಚಿಕ್ಕಣ್ಣ 16ನೇ ಶತಮಾನದ ಪ್ರಮುಖ ಸಂತರಲ್ಲಿ ಕನಕದಾಸರು ಒಬ್ಬರು. ಅವರು ಒಬ್ಬ ಕವಿ ಎನ್ನುವುದು ಹಲವರಿಗೆ ಗೊತ್ತಿರಲ್ಲ. ಕನಕದಾಸರ ಸಾಮಾಜಿಕ ಚಿಂತನೆ ಯುವಕರಿಗೆ ಮಾರ್ಗದರ್ಶನವಾಗಿದೆ ಎಂದರು. ಯಾಮಿನಿ ಭಟ್.ಪಿ ಮತ್ತು ಅಂಶುಮಾಲಿ ಗಮಕ ವಾಚಿಸಿದರು.
ಪ್ರೊ.ರವೀಶ್ ಕುಮಾರ್ ಇದ್ದರು. ಅಭಿನಯ ಸ್ವಾಗತಿಸಿದರು. ಸಂಚಾಲಕ ಪ್ರೊ.ಎಸ್.ಪಿ ಅಜಿತ್ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾ ರಾವ್ ನಿರೂಪಿಸಿದರು. ಸುಶ್ಮಿತಾ ವಂದಿಸಿದರು.

