ಮೂಡುಬಿದರೆ : ಕಲ್ಲಬೆಟ್ಟು ಗ್ರಾಮದ ರಾಮನಗುಡ್ಡೆ ಎಂಬಲ್ಲಿ ಕೂಲಿ ಕಾಮರ್ಿಕ ಅಣ್ಣು (45) ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಸಿರಿಲ್ ಸೆರಾವೋ ಎಂಬವರಿಗೆ ಸೇರಿದ ಕೆಂಪು ಕಲ್ಲಿನ ಕೋರೆಯಲ್ಲಿ ಇತರ ಇಬ್ಬರು ಕಾಮರ್ಿಕರೊಂದಿಗೆ ಅಣ್ಣು ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ 9.30ರ ವೇಳೆಗೆ ಯಂತ್ರದಲ್ಲಿ ಕಲ್ಲು ಕಡಿದು ಬಳಿಕ ಬೇರ್ಪಡಿಸುತ್ತಿದ್ದಾಗ ಕುಸಿದು ಬಿದ್ದರು. ಇತರ ಕಾಮರ್ಿಕರು ಸೇರಿ ಕೂಡಲೇ ಅವರನ್ನು ಮೂಡುಬಿದರೆಯ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ್ದು ಹೃದಯಾಘಾತ ಅಥವಾ ಮೆದುಳಿನ ರಕ್ತ ಸ್ರಾವದಿಂದ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಮೃತರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಮೂಡುಬಿದರೆ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರ
