ಸುದ್ದಿ9ಬಂಟ್ವಾಳ: ಭಾರತೀಯ ಜನತಾಪಾಟರ್ಿ ಪುದು ಗ್ರಾಮ ಸಮಿತಿ ಹಾಗೂ ಬಿಜೆಪಿ ಯುವಮೋರ್ಚ ಪುದು ಗ್ರಾಮದ ಆಶ್ರಯದಲ್ಲಿ ಕಾಗರ್ಿಲ್ ವಿಜಯ ದಿವಸ್ ಹಾಗೂ ಹುತಾತ್ಮ ಯೋದರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಫರಂಗಿಪೆಟೆ ಬಸ್ಸು ನಿಲ್ದಾಣದ ಬಳಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಬಿಜೆಪಿ ಯುವ ಮೋಚರ್ಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಶ್ ಶೆಟ್ಟಿ ಫಜೀರುಗುತ್ತು ಮಾತನಾಡಿ ಕಾಗರ್ಿಲ್ ವಿಜಯ ಈ ದೇಶದ ಇತಿಹಾಸದ ಸುವರ್ಣಕ್ಷರಗಳಲ್ಲಿ ಬರೆದಿಡ ಬೇಕಾದ ದಿನ. ಅದೆಷ್ಟೋ ವೀರ ಯೋಧರ ಹೋರಾಟ, ಬಲಿದಾನದ ಫಲವಾಗಿ ಕಾಗರ್ಿಲ್ ಯುದ್ದದಲ್ಲಿ ಭಾರತ ಪಾಕಿಸ್ತಾನದ ವಿರುದ್ದ ಗೆಲುವು ಸಾಧಿಸಿದೆ. ಆದರೆ ಕಳೆದ 10 ವರ್ಷಗಳಿಂದ ಕಾಂಗ್ರೆಸ್ ನೇತೃತ್ವದ ಸಕರ್ಾರ ಕಾಗರ್ಿಲ್ ವಿಜಯ ದಿನಾಚರಣೆಯನ್ನು ಆಚರಿಸದೆ ದೇಶ ಭಕ್ತ ಯೋಧರಿಗೆ ಗೌರವ ನೀಡದೆ ಅವಮಾನಿಸಿದೆ ಎಂದರು. ಇದೇ ಸಂದರ್ಭ ನಿವೃತ್ತ ಯೋಧರಾದ ಬಿ.ಡಿ.ನಾರಾಯಣ, ಡಿ. ಜೀವನ್ ಅತ್ತಾವರ, ನಾರಾಯಣ ಮೂಲ್ಯ ಅವರನ್ನು ಗೌರವಿಸಲಾಯಿತು. ಯುವಮೋಚರ್ಾ ರಾಜ್ಯ ಉಪಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು, ಮಂಗಳೂರು ಕ್ಷೇತ್ರ ಯುವಮೋಚರ್ಾ ಅಧ್ಯಕ್ಷ ಜೀವನ್ ತೊಕ್ಕೋಟ್ಟು, ಪ್ರಧಾನ ಕಾರ್ಯದಶರ್ಿ ಮನೋಜ್ ಆಚಾರ್ಯ, ಶಕ್ತಿ ಕೇಂದ್ರ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಜಿ.ಪಂ.ಸದಸ್ಯೆ ಜಯಶ್ರೀ ಕೆ. ಪುದು ಗ್ರಾ.ಪಂ.ಸದಸ್ಯ ಗಣೇಶ್, ದಿನೇಶ್ ಶೆಟ್ಟಿ ಕೊಟ್ಟುಂಜ, ಸುನೀಲ್ ಕುಮಾರ್, ಸತೀಶ್ ಶೆಟ್ಟಿ ಕುಂಪಣ ಮಜಲು, ಪ್ರಮೋದ್ ಸುಜೀರು, ಕ್ಯಾ. ಬೃಜೇಶ್ ಚೌಟ ಮತ್ತಿತರರು ಹಾಜರಿದ್ದರು

By suddi9

Leave a Reply

Your email address will not be published. Required fields are marked *